ಚಿತ್ರದುರ್ಗ: ರೈತನ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಮರ ರಾತ್ರೋರಾತ್ರಿ ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ನಡೆದಿದೆ. ಇದೇ ರೀತಿಯಾಗಿ ಚಳ್ಳಕೆರೆ ತಾಲೂಕಿನ ಚೆನ್ನಮ್ಮನಗತಿಹಳ್ಳಿ ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದು ಇದು ಮಾಸುವ ಮುನ್ನವೇ ಫಸಲಿಗೆ ಬಂದಿದ್ದ 40 ಕ್ಕೂ ಹೆಚ್ಚು ಮರ ಕಡಿದು ನೆಲಸಮ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಣಿವೆ ಜೋಗಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಣಿವೆಹಳ್ಳಿಯ ತಿಪ್ಪೇಸ್ವಾಮಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ.ಕಳೆದ 3 ವರ್ಷದ ಹಿಂದೆ ಇದೇ ರೈತನ 50 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ್ದರು. ಜಮೀನಿನಲ್ಲಿನ ವಿದ್ಯುತ್ ಕಟ್ ಮಾಡಿ, ಮೋಟಾರ್ ಬಾಕ್ಸ್ ಗೆ ವಿದ್ಯುತ್ ಹರಿಸಿ ಬಾಕ್ಸ್ ಮುಟ್ಟಿದರೆ ವಿದ್ಯುತ್ ಶಾಕ್ ಹೊಡೆಯುವಂತೆ ಮಾಡಿದ್ದಾರೆ.
ಕಿಡಿಗೇಡಿಗಳ ಕೃತ್ಯಕ್ಕೆ ರೈತ ತಿಪ್ಪೇಸ್ವಾಮಿ ಕುಟುಂಬ ಹೈರಾಣಾಗಿದ್ದಾರೆ.ಇವರ ಅಕ್ಕಪಕ್ಕ ಜಮೀನಿನಲ್ಲಿ ಇಲ್ಲದ ಸಮಸ್ಯೆ,ತಿಪ್ಪೇಸ್ವಾಮಿ ಜಮೀನು ಟಾರ್ಗೆಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
PublicNext
16/01/2025 05:45 pm