ಹೊಸದುರ್ಗ : ತಾಲೂಕಿನ ಕಣಿವೆ ಜೋಗಿಹಳ್ಳಿ ಗ್ರಾಮದಲ್ಲಿ ರೈತ ತಿಪ್ಪೇಸ್ವಾಮಿ ಎಂಬಾತರ ತೋಟದಲ್ಲಿ ಸುಮಾರು 30ಕ್ಕೂ ಹೆಚ್ಚು ನಾಲ್ಕು ವರ್ಷದ ಅಡಿಕೆ ಸಸಿಗಳನ್ನು ಕಟಾವು ಮಾಡಿ ಅಟ್ಟಹಾಸವನ್ನು ಮೆರೆದಿದ್ದಾರೆ.
ಇದೇ ತೋಟದಲ್ಲಿ ಕಳೆದ ಐದು ವರ್ಷಗಳ ಹಿಂದೆಯೂ ಕೂಡ ಅಡಿಕೆ ತೋಟಗಳ ಕಟಾವು ಮಾಡಿದ್ದ ದುಷ್ಕರ್ಮಿಗಳು ಮತ್ತೆ 30ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಕಟಾವು ಮಾಡಿ ಪರಾರಿಯಾಗಿದ್ದಾರೆ. ಅಲ್ಲದೇ ಪದೇ ಪದೇ ತೋಟದಲ್ಲಿ ಇರುವ ಕೇಬಲ್ ವಯರ್,ಮೋಟರ್ ಪಂಪ್ ,ಹೀಗೆ ಅನೇಕ ವಸ್ತುಗಳನ್ನ ಅಪಹರಿಸಿದ್ದು ಇದುವರೆಗೂ ಪೊಲೀಸ್ ಠಾಣೆಗೆ ಕಂಪ್ಲೇಂಟ್ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರದ ತಿಪ್ಪೇಸ್ವಾಮಿಯವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
PublicNext
17/01/2025 02:23 pm