", "articleSection": "Infrastructure,Crime", "image": { "@type": "ImageObject", "url": "https://prod.cdn.publicnext.com/s3fs-public/378325-1737027287-8.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: KRS ನಲ್ಲಿ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ವಾಹನ ತಡೆದು ಹಣ ವಸೂಲಿ ಮಾಡುತ್ತಿದ್ದ ಪೊಲೀಸ್ ಪೇದಗಳನ್ನ ಅಮಾನತು ಮಾಡಿದ ಘಟನೆ ಇನ್ನು...Read more" } ", "keywords": "Mandya municipal council, Contractor daylight robbery, Police investigation, Karnataka news, Mandya city news, Municipal council corruption, Indian civic body corruption, Karnataka government policies, Civic body scams, Corruption in Karnataka.,Mandya,Infrastructure,Crime", "url": "https://publicnext.com/node" } ಮಂಡ್ಯ: ಪೊಲೀಸರ ಸರತಿ‌ ಆಯ್ತು, ಈಗ ವಸೂಲಿ‌ ಪುರಸಭೆ ಸರತಿ!- ಗುತ್ತಿಗೆದಾರನ ಹಗಲು ದರೋಡೆಗೆ ಸಾಥ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಪೊಲೀಸರ ಸರತಿ‌ ಆಯ್ತು, ಈಗ ವಸೂಲಿ‌ ಪುರಸಭೆ ಸರತಿ!- ಗುತ್ತಿಗೆದಾರನ ಹಗಲು ದರೋಡೆಗೆ ಸಾಥ್

ಮಂಡ್ಯ: KRS ನಲ್ಲಿ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ವಾಹನ ತಡೆದು ಹಣ ವಸೂಲಿ ಮಾಡುತ್ತಿದ್ದ ಪೊಲೀಸ್ ಪೇದಗಳನ್ನ ಅಮಾನತು ಮಾಡಿದ ಘಟನೆ ಇನ್ನು ಹಸಿಯಾಗಿರುವಾಗಲೇ ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ ಮತ್ತೊಂದು ಅಂತಹುದೇ ದಂಧೆ ಬಟಾಬಯಲಾಗಿದೆ.

ಗಂಜಾಂನ ದೊಡ್ಡಗೋಸಾಯಿ ಘಾಟ್ ಹಾಗೂ ಸಂಗಮ್ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಂದ ಪಾರ್ಕಿಂಗ್ ಶುಲ್ಕವಾಗಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದ್ದು, ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.

ಸಂಗಮ ಹಾಗೂ ದೊಡ್ಡ ಗೋಸಾಯಿ ಘಾಟ್‌ಗೆ ಬರುವ ಪ್ರವಾಸಿಗರ ವಾಹನಗಳಿಂದ ಪಾರ್ಕಿಂಗ್ ಶುಲ್ಕ ಪಡೆಯಲು ಪುರಸಭೆಯಿಂದ ಟೆಂಡರ್ ಪಡೆದಿರುವ ಗುತ್ತಿಗೆದಾರರು ಬಸ್ಸು ಒಂದಕ್ಕೆ 100 ರೂ., ಕಾರು, ಜೀಪು ಒಂದಕ್ಕೆ 50 ರೂ., ಮಿನಿ ಬಸ್, ಟೆಂಪೋ ಒಂದಕ್ಕೆ 80 ರೂ., ಟಾಟಾ ಸುಮೋ, ಮೆಟಡೋರ್, ಕ್ವಾಲಿಸ್ ಒಂದಕ್ಕೆ 60, ಸ್ಕೂಟರ್ ಗೆ 10 ರೂ. ದರ ನಿಗದಿ ಮಾಡಿ ಟೆಂಡರ್ ನೀಡಲಾಗಿದೆ.

ಆದರೆ ಗುತ್ತಿಗೆದಾರರು, ಶ್ರೀರಂಗಪಟ್ಟಣ ಗೋಸಾಯಿ ಘಾಟ್ ಹಾಗೂ ಟೌನ್ ಮುನ್ಸಿಪಲ್ ಕೌನ್ಸಿಲ್ ಎಂಬ ಹೆಸರಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜಾರೋಷವಾಗಿ ಕಾರ್ ವೊಂದಕ್ಕೆ 80 ರೂ., ಬಸ್ ಗೆ 200 ರೂ. ವಸೂಲಿ ಮಾಡುತ್ತಿದ್ದಾರೆ. ಇದರಿಂದ ಪ್ರವಾಸಿಗರು ಪಾರ್ಕಿಂಗ್ ದಂಧೆ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಟೆಂಡರ್ ದಾರರು ಯಾವುದೇ ದರ ಪಟ್ಟಿಗಳ ನಾಮಫಲಕಗಳನ್ನು ಹಾಕದೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದರೂ, ಟೆಂಡರ್ ನೀಡಿರುವ ಪುರಸಭೆ ಹಾಗೂ ಮುಜರಾಯಿ ಇಲಾಖೆಯ ಜಾಣ ಕುರುಡಿಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ. ಇವರ ಅಭಯವಿಲ್ಲದೆ ಯಾವುದೂ ನಡೆಯೊಲ್ಲ ಅನ್ನೊ ಆರೋಪ ಕೇಳಿ ‍ಬಂದಿದೆ.

Edited By : Somashekar
PublicNext

PublicNext

16/01/2025 05:05 pm

Cinque Terre

31.99 K

Cinque Terre

1

ಸಂಬಂಧಿತ ಸುದ್ದಿ