ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಗಿಯದ ಮೈಕ್ರೋ ಫೈನಾನ್ಸ್ ಕಿರುಕುಳ

ಮಂಡ್ಯ: ಮೈಕ್ರೋ ಫೈನಾನ್ಸ್ ಕಂಪನಿಯಿಂದ ಪಡೆದಿದ್ದ ಸಾಲಕ್ಕೆ ಮನೆ ಜಪ್ತಿ ಮಾಡಿದ ಕಂಪನಿ ಸಿಬ್ಬಂದಿ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಹಲಗೂರು ಹೊಬಳಿ ಕೊನ್ನಾಪುರ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಅಂದಾನಯ್ಯ ಎಂಬುವರ ಪತ್ನಿಯಾದ ಪ್ರೇಮ(52) ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ, ಸಾವು ಬದುಕಿ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರನಿಗಾ ಘಟಕದಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೀವನ್ ಫೈನಾನ್ಸ್ ಎಂಬ ಹೆಸರಿನ ಕಂಪನಿ ಯಿಂದ 6 ಲಕ್ಷ ರೂ ಸಾಲ ಪಡೆದಿದ್ದ ಪ್ರೇಮ ಅವರು ಕಳೆದ 5-6 ವರ್ಷ ಗಳಿಂದ ಸಾಲದ ಕಂತಿನ ಹಣ ಕಟ್ಟುತ್ತ ಬಂದಿದ್ದರು ಸಹ ಇದು ಬಡ್ಡಿಗೆ ಜಮ ಆಗಿದೆ ಎಂದು ಹೇಳಿ 6 ಲಕ್ಷ ಹೊಸ ಸಾಲ ಎಂದು ನವೀಕರಿಸಿ ಕೊಂಡು ಉಳಿಕೆ ಬಡ್ಡಿ ಸೇರಿ 8 ಲಕ್ಷ ಕಟ್ಟಬೇಕೆಂದು ಕಂಪನಿಯವರು ಪಟ್ಟು ಹಿಡಿದಿದ್ದರು ಈ ಕುರಿತು ನೋಟಿಸ್ ಕೂಡಾ ನೀಡಿದ್ದರು ಎನ್ನಲಾಗಿದೆ.

ಹಣ ಕಟ್ಟಲು ವಿಳಂಬವಾದ ಕಾರಣಕ್ಕೆ ಒಂದು ವಾರದ ಹಿಂದೆ ಕಂಪನಿಯವರು ಈ ಕುಟುಂಬ ವಾಸವಿದ್ದ ಮನೆಯನ್ನು ಸೀಜ್ ಮಾಡಿದ್ದರು. ಕಳೆದ ಒಂದು ವಾರದಿಂದ ಪ್ರೇಮ ಹಾಗೂ ಕುಟುಂಬದವರು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದು ಇದರಿಂದ ಮನನೊಂದ ಪ್ರೇಮ ಅವರು ಬೆಳಿಗ್ಗೆ 11.30 ರ ಸಮಯದಲ್ಲಿ ವಿಷಸೇವಿಸಿದ್ದುಅಸ್ವಸ್ಥಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಹಲಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Suman K
PublicNext

PublicNext

28/01/2025 04:59 pm

Cinque Terre

34.95 K

Cinque Terre

0