", "articleSection": "Infrastructure,Crime", "image": { "@type": "ImageObject", "url": "https://prod.cdn.publicnext.com/s3fs-public/286525-1738209824-WhatsApp-Image-2025-01-30-at-9.33.07-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: ಹೀಗೆ ತಂತಿಬೇಲಿ ಮಧ್ಯೆ ನುಸುಳಿಕೊಂಡು ಹೋಗುತ್ತಿರುವ ಮಕ್ಕಳು! ಮನೆಗೆ ಹೋಗಲಾಗದಂತಹ ರೀತಿ ಮನೆ ಮುಂದೆ ತಂತಿ ಬೇಲಿ... ತಡವರಿಸುತ್ತಿರುವ ವ...Read more" } ", "keywords": "Mandya, Public Road, Barbed Wire Fencing, Community Outrage, Gram Panchayat Silence, Karnataka News, Mandya News, Rural Development, Infrastructure Issues.,Infrastructure,Crime", "url": "https://publicnext.com/node" }
ಮಂಡ್ಯ: ಹೀಗೆ ತಂತಿಬೇಲಿ ಮಧ್ಯೆ ನುಸುಳಿಕೊಂಡು ಹೋಗುತ್ತಿರುವ ಮಕ್ಕಳು! ಮನೆಗೆ ಹೋಗಲಾಗದಂತಹ ರೀತಿ ಮನೆ ಮುಂದೆ ತಂತಿ ಬೇಲಿ... ತಡವರಿಸುತ್ತಿರುವ ವೃದ್ಧರು. ನೋಡಿದ್ರೆ ಯಾವುದೋ ಅತಿಕ್ರಮಿತ ಪ್ರದೇಶ ಅಥವಾ ಯಾವುದೋ ಬಾರ್ಡರ್ ಕ್ರಾಸ್ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಇಬ್ಬರ ವೈಯಕ್ತಿಕ ಜಗಳದ ಹಿನ್ನಲೆಯಲ್ಲಿ ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡ ತಂತಿಬೇಲಿ ಹಾಕಿ ನಿರ್ಬಂಧ ವಿಧಿಸಿರುವ ಪರಿಣಾಮ ಈ ಪರಿಸ್ಥಿತಿ ಉದ್ಭವಿಸಿದೆ.
ಮಂಡ್ಯ ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮುಖ್ಯ ರಸ್ತೆಯೊಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಹಾಗೂ ಮನೆಗಳ ಮುಂಭಾಗದಲ್ಲಿ ಯಾರೂ ಹೊರಗೆ ಬಾರದಂತೆ ತಂತಿಬೇಲಿ ಹಾಕಲಾಗಿದೆ. ಗ್ರಾಮದ ರುಕ್ಮಿಣಿ ಎಂಬುವವರು ಈ ಹಿಂದೆ ತಮ್ಮ ಜಮೀನಿನಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಸರ್ಕಾರಕ್ಕೆ 10x110 ಅಡಿಗಳ ರಸ್ತೆಯನ್ನು ಬಿಟ್ಟುಕೊಟ್ಟಿದ್ದರು. ಸುಮಾರು ವರ್ಷದಿಂದ ಇಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರು. ಆದರೆ, ಎರಡು ದಿನಗಳ ಹಿಂದೆ ಗ್ರಾಮದ ಸಂಬಧಿಕರೊಬ್ಬರೊಂದಿಗೆ ಜಗಳವಾಡಿಕೊಂಡು ರಸ್ತೆ ಬಂದ್ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರುಕ್ಮಿಣಿಯವರು ತಾವೇ ಸರ್ಕಾರಕ್ಕೆ ರಸ್ತೆ ಹಾಗೂ ಮೋರಿಗೆಂದು ಬರೆದು ಕೊಟ್ಟಿರುವ ಪತ್ರ ಕೂಡ ಲಭ್ಯವಿದ್ದು, ಒಮ್ಮೆ ರಸ್ತೆ ಮತ್ತಿತರ ಸಾರ್ವಜನಿಕರ ಅನುಕೂಲಕ್ಕೆ ಕೊಟ್ಟ ಜಾಗಕ್ಕೆ ಅವರ ಹಕ್ಕು ಇರೋದಿಲ್ಲ ಅನ್ನೋ ನಿಯಮ ಇದ್ದರೂ ಜಾಗ ಕೊಟ್ಟ ನಂತರ ಅಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಿದ ನಂತರ ಬೇಲಿ ಹಾಕಿರುವುದರಿಂದ ಸಾರ್ವಜನಿಕರು, ವಯಸ್ಸಾದವರು, ಮಕ್ಕಳು ಬೇಲಿ ನುಗ್ಗಿ ತಮ್ಮ ಮನೆಗಳಿಗೆ ಹೋಗುವ ಸ್ಥಿತಿ ಬಂದಿದೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪ್ರಯೋಜನವಾಗಿಲ್ಲ, ಸಾತನೂರು ಗ್ರಾಮ ಪಂಚಾಯಿತಿ ಪಿಡಿಒ ತನಗೆ ಗೊತ್ತೇ ಇಲ್ಲ ಅಂತಾರೆ. ಇಒ ಇದಕ್ಕೂ ನನಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕರ ನೋವು, ಗೋಳು ಕೇಳೋರು ಯಾರೂ ಇಲ್ಲವೇ!?
PublicNext
30/01/2025 09:34 am