ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ರಮ‌ ಮದ್ಯಮಾರಾಟ ಮಾಡುತ್ತಿದ್ದ ಅಂಗಡಿ ಹಸಗೂ ಮನೆಗಳ ಮೇಲೆ ಅಬಕಾರಿ‌ಅಧಿಕಾರಿಗಳು ದಾಳಿ

ಚಳ್ಳಕೆರೆ ತಾಲೂಕಿನ ಸೋಮಗದ್ದು ಹಾಗೂ , ನನ್ನಿವಾಳ ಗ್ರಾಮದ ಗ್ರಾಮಸ್ಥರು ಅಕ್ರಮ‌ಮದ್ಯಮಾರಾಡದ ಬಗ್ಗೆ ದೂರು ನೀಡಿದ ಬೆನ್ನಲ್ಲೇ ಅಬಕಾರಿ ನಿರೀಕ್ಷಕರು-1 ಮತ್ತು ಉಪ ನಿರೀಕ್ಷಕರು-2 ಹಾಗೂ ಚಳ್ಳಕೆರೆ ವಲಯ ಸಿಬ್ಬಂದಿ ಹಾಗೂ ಗೃಹರಕ್ಷಕರು ಎಲ್ಲರೂ ಸೇರಿ ಸೋಮಗುದ್ದು, ಗೊರ್ಲಕಟ್ಟೆ, ನನ್ನಿವಾಳ ಗ್ರಾಮಗಳಲ್ಲಿ ಅಬಕಾರಿ ದಾಳಿ ನಡೆಸಿ ಕಿರಾಣಿ ಅಂಗಡಿ, ಪೆಟ್ಟಿಗೆ ಅಂಗಡಿ, ಟೀ ಹೋಟೆಲ್ ಗಳಲ್ಲಿ ಪರಿಶೀಲಾಯಿತು ಮತ್ತು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯ ಸೇವಿಸಲು ಅವಕಾಶ ಮಾಡಿಕೊಟ್ಟ ಪೆಟ್ಟಿಗೆ ಅಂಗಡಿ/ ಕಿರಾಣಿ ಅಂಗಡಿ ಮಾಲೀಕರ ವಿರುದ್ಧ 4 ಪ್ರಕರಣಗಳು ದಾಖಲಿಸಲಾಗಿರುತ್ತದೆ ಹಾಗೂ ಸದರಿ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟದ ಬಗ್ಗೆ ಹಾಗೂ ಅಬಕಾರಿ ಕಾನೂನು ಬಗ್ಗೆ ಗ್ರಾಮಸ್ಥರಿಗೆ ತಿಳುವಳಿಕೆ ನೀಡಲಾಯಿತು ಮತ್ತು ಗೊರ್ಲಕಟ್ಟೆ ಗ್ರಾಮದಲ್ಲಿ ಗ್ರಾಮ ಸಭೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಸದರಿ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟವಾಗದಂತೆ ನಿಗಾವಹಿಸಲಾಗುವುದು ಎಂದು ಅಬಕಾರಿ ಅಧಿಕಾರಿಗಳು ಭರವಸೆ ನೀಡಿದರು.

Edited By : PublicNext Desk
Kshetra Samachara

Kshetra Samachara

13/01/2025 09:28 pm

Cinque Terre

2.2 K

Cinque Terre

0

ಸಂಬಂಧಿತ ಸುದ್ದಿ