ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಕ್ಷಯ ಮುಕ್ತ ಭಾರತ ನಮ್ಮ ಗುರಿಯಾಗಿದೆ

ಚಳ್ಳಕೆರೆ: ಕ್ಷಯ ಮುಕ್ತ ಭಾರತ ನಮ್ಮ ಗುರಿಯಾಗಿದೆ ಎಂದು ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಸುಗಮಕಾರರಾದ ಸಿ.ವಸಂತಮ್ಮ ತಿಳಿಸಿದರು. ತಾಲ್ಲೂಕಿನ ‌ಸಿದ್ದಾಪುರ ಗ್ರಾಮದ ಶ್ರೀದುರ್ಗಾಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ "ಕ್ಷಯ ಮುಕ್ತ 100 ದಿನಗಳ ಅಭಿಯಾನದ ಜನಜಾಗೃತಿ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. "ಕ್ಷಯ ರೋಗವು "ಮೈಕೋಬ್ಯಾಕ್ಟೀಯಂ ಟ್ಯುಬರ್ ಕ್ಯುಲೋಸಿಸ್" ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ.

ಇದರ ಪ್ರಮುಖ ಲಕ್ಷಣಗಳೆಂದರೆ 'ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಇರುವುದು, ಕೆಮ್ಮಿದಾಗ ಕಫ ಬರುವುದು, ಕಫದಲ್ಲಿ ರಕ್ತ ಬರುವುದು, ಸಂಜೆ ಹೊತ್ತು ಜ್ವರ ಬರುವುದು, ಜಾಸ್ತಿ ಬೆವರುವುದು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದಾಗಿದೆ, ಈ ಮೇಲಿನ ಲಕ್ಷಣಗಳು ಕಂಡು ಬಂದರೆ ಸ್ಥಳೀಯ ಆಶಾ ಕಾರ್ಯಕರ್ತೆಯ ಗಮನಕ್ಕೆ ತಂದು ಕಫ ಪರೀಕ್ಷೆ ಮಾಡಿಸಿ ರೋಗ ಪತ್ತೆಯಾದರೆ ಸರ್ಕಾರದಿಂದ ಆರು ತಿಂಗಳ ಕಾಲ ಉಚಿತ ಚಿಕಿತ್ಸೆ ಮತ್ತು ಪ್ರತಿ ತಿಂಗಳು ರೋಗಿಯ ಖಾತೆಗೆ ಸಹಾಯಧನವು ಸಿಗುತ್ತದೆ. ಆದ್ದರಿಂದ ಈ ರೋಗದ ಬಗ್ಗೆ ಜನರು ಭಯ ಪಡದೆ ಸೂಕ್ತ ಚಿಕಿತ್ಸೆ ಪಡೆದರೆ ಶಾಶ್ವತವಾಗಿ ಕ್ಷಯ ಮುಕ್ತರಾಗಿ ಉತ್ತಮ ಜೀವನ ನಡೆಸಬಹುದು ಇದರಿಂದ ನಾವೆಲ್ಲರೂ ಸೇರಿ ಗ್ರಾಮ-ನಗರ-ಜಿಲ್ಲೆ-ಭಾರತವನ್ನು ಕ್ಷಯ ಮುಕ್ತವಾಗಿ ಮಾಡಬಹುದು ಹೇಳಿದರು. ಈ ಜನಜಾಗೃತಿ ಕಾರ್ಯಕ್ರಮದಲ್ಲಿ ನಗರಂಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ, ಇದ್ದರು.

Edited By : PublicNext Desk
Kshetra Samachara

Kshetra Samachara

13/01/2025 05:14 pm

Cinque Terre

1.46 K

Cinque Terre

0

ಸಂಬಂಧಿತ ಸುದ್ದಿ