ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಬಸ್ ಟಿಕೆಟ್ ದರ ಹೆಚ್ಚಳ - ಜವಾರಿ ಮಾತಿನಲ್ಲೇ ಸಿಎಂಗೆ ಗುಮ್ಮಿದ ರೈತ

ಅಥಣಿ: ಪಂಚ ಗ್ಯಾರಂಟಿ ಮೂಲಕ ಅಧಿಕಾರದ ಚುಕ್ಕಾನೆ ಹಿಡಿದ ಸಿದ್ದರಾಮಯ್ಯ ಅವರ ಸರ್ಕಾರ ಮತ್ತೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದೆ. ಈ ಕುರಿತು ಉತ್ತರ ಕರ್ನಾಟಕದ ಹಳ್ಳಿ ಸೊಗಡಿನಲ್ಲಿ ವ್ಯಕ್ತಿಯೊಬ್ಬರು ಮಾತನಾಡಿದ್ದು ಸಕತ್ ಸದ್ದು ಮಾಡುತ್ತಿದೆ.

ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಸಹದೇವ ರಾಜ್ಯ ಸರ್ಕಾರದ ಅವೈಜ್ಞಾನಿಕ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರದ ಗ್ಯಾರಂಟಿ ಗಂಡನಿಂದ ದುಪ್ಪಟ್ಟು ಹಣ ಲೂಟಿ ಮಾಡಿ ಹೆಂಡತಿಯರಿಗೆ ಫ್ರಿ ಬಸ್ ವ್ಯವಸ್ಥೆ ಕಲ್ಪಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇದರ ಬದಲು ರಾಜ್ಯದ ಅಭಿವೃದ್ಧಿಗಾಗಿ ಹಣ ಸದ್ಬಳಕೆ ಮಾಡಬೇಕು. ರೈತರು ಒಣ ಭೂಮಿಗಳಿಗೆ ಪೂರಕ ನೀರು, ವಿದ್ಯುತ್ ಮತ್ತು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನೀಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಹಳ್ಳಿ ಸೊಗಡಿನಲ್ಲೇ ಗುಮ್ಮಿದ್ದಾರೆ.

Edited By : Ashok M
PublicNext

PublicNext

09/01/2025 04:31 pm

Cinque Terre

26.66 K

Cinque Terre

0

ಸಂಬಂಧಿತ ಸುದ್ದಿ