ಹೊಸದುರ್ಗ : ಪ್ಲಾಸ್ಟಿಕ್ ಬಾಟಲ್ ಗಳಿಂದ ಉಂಟಾಗುವ ತ್ಯಾಜ್ಯವನ್ನ ತಡೆಗಟ್ಟುವ ಹಿನ್ನಲೆಯಲ್ಲಿ ಹೊಸದುರ್ಗ ಪುರಸಭೆ ವತಿಯಿಂದ ಅಳವಡಿಸಿರುವ ಪ್ಲಾಸ್ಟಿಕ್ ಪೆಟ್ ಬಾಟಲ್ ಮರುಬಳಕೆ ಯಂತ್ರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಪೆಟ್ ಬಾಟಲ್ ಮರುಬಳಿಕೆ ಯಂತ್ರವನ್ನು ಆರು ತಿಂಗಳ ಹಿಂದೆ ಅಳವಡಿಸಲಾಗಿದೆ.
ಪುರಸಭೆಯ 15ನೇ ಹಣಕಾಸಿನ ಸ್ವಚ್ಛ ಭಾರತ ಯೋಜನೆ ಅಡಿ ತಲಾ ಒಂದು ಪ್ಲಾಸ್ಟಿಕ್ ಪೆಟ್ ಬಾಟಲ್ ಮರುಬಳಿಕೆ ಯಂತ್ರವನ್ನು 4.ಲಕ್ಷ ರು ವೆಚ್ಚದಲ್ಲಿ ಖರೀದಿಸಲಾಗಿದೆ. ಪ್ರಯಾಣ ಮಾಡುವ ಮಾರ್ಗ ಸಾರ್ವಜನಿಕರು ಕುಡಿಯುವ ನೀರು ಹಾಗೂ ತಂಪು ಪಾನೀಯಗಳ ಬಾಟಲಿಗಳನ್ನ ಖರೀದಿಸುವುದು ಸಾಮಾನ್ಯ. ಹೀಗೆ ಬಳಸಿದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದನ್ನ ತಪ್ಪಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಮರುಬಳಿಕೆ ಯಂತ್ರ ಸ್ಥಾಪಿಸಲಾಗಿದೆ..
Kshetra Samachara
09/01/2025 12:43 pm