ಯಲ್ಲಾಪುರ: ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡುಬಂದ ಕಾರೊಂದು ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಾಯವಾದ ಘಟನೆ ಬುಧವಾರ ಯಲ್ಲಾಪುರ ತಾಲೂಕಿನ ಡೌಗಿನಾಳಾ ಕ್ರಾಸ್ ಸಮೀಪ ನಡೆದಿದೆ.
ಆರೋಪಿ ಕಾರು ಚಾಲಕ ಹಳಿಯಾಳ ತಾಲೂಕಿನ ಕೆಸರೊಳ್ಳಿಯ ಗೌಂಡಿ ಕೆಲಸದ ಇನುಸ ತಂದೆ ಷರೀಪ್ ಬಡಗಿ ಎಂಬಾತನು ತನ್ನ ಕಾರನ್ನು ಹಳಿಯಾಳ ಕಡೆಯಿಂದ ವೇಗವಾಗಿ ಚಲಾಯಿಸಿಕೊಂಡುಬಂದು ಕಾರಿನ ನಿಯಂತ್ರಣ ಕಳೆದುಕೊಂಡು, ಯಲ್ಲಾಪುರ ಕಡೆಯಿಂದ ಹಳಿಯಾಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಶಿರಸಿಯ ಗಣೇಶನಗರದ ಶಿವಾಜಿ ತಂದೆ ರಾಮು ಭೋವಿವಡ್ಡರ್ ಗಾಯಗೊಂಡಿದ್ದು, ಬೈಕ್ ಹಾಗೂ ಕಾರು ಜಕಂಗೊಂಡಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/01/2025 07:47 pm