ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಫಲಾನುಭವಿಗಳಿಗೆ ವಾಟರ್ ಪಂಪ್, ಮೋಟಾರ್ ಸಲಕರಣೆ ವಿತರಿಸಿದ ಶಾಸಕಿ ರೂಪಕಲಾ ಶಶಿಧರ್

Av

Headline

ಕೋಲಾರ - ಫಲಾನುಭವಿಗಳಿಗೆ ಪಂಪು ಮೋಟರ್ ಸಲಕರಣೆಗಳ ವಿತರಣೆ- ಶಾಸಕಿ ರೂಪಕಲಾ ಶಶಿಧರ್

ಕೆಜಿಎಫ್ - ಸ್ವಂತ ಜಮೀನಿದ್ದರು ಸುಮಾರು 50 - 60 ವರ್ಷಗಳಿಂದ ಕೊಳವೆ ಬಾವಿಗಳನ್ನು ಕೊರೆಯಿಸಲು ಆರ್ಥಿಕವಾಗಿ ಶಕ್ತಿಯಿಲ್ಲದೇ ಇದ್ದಂತಹ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವಾರಿಗಾಗಿ ಗಂಗಾ ಕಲ್ಯಾಣ ಯೋಜನೆಯ ಮೂಲಕ ಸರ್ಕಾರಿ ಉಚಿತವಾಗಿ ಕೊಳವೆ ಬಾವಿಗಳನ್ನು ಕೊರೆಯಿಸಿ ಅಗತ್ಯ ಸಲಕರಣೆಗಳನ್ನು ನೀಡುತ್ತಿದ್ದು ಸದುಪಯೋಗ ಪಡಿಸಿಕೊಂಡು ಜೀವನವನ್ನು ನಡೆಸಲು ಮುಂದಾಗ ಬೇಕು ಶಾಸಕಿ ರೂಪಕಲಾ ಶಶಿಧರ್ ಅವ್ರು ತಿಳಿಸಿದರು. ಕೆಜಿಎಫ್ ಹೊರವಲಯದ ಪಾರಂಡಹಳ್ಳಿಯ ತಾಲೂಕು ಪಂಚಾಯಿತಿ ಆವರಣದಲ್ಲಿ ಅಂಬೇಡ್ಕರ್ ಅಭಿವೃದ್ಧಿ ‌ನಿಗಮ , ಹಾಗೂ ವಿವಿಧ ನಿಗಮಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಪಂಪು ಮೋಟರ್ ವಿತರಿಸಿ ಮಾತನಾಡಿದರು, ಒಂದು ಎಕರೆ ಎರಡು ಎಕರೆ ಸ್ವಂತ ಜಮೀನಿದ್ದರು ನೀರಿಲ್ಲದೇ ಸ್ವಂತವಾಗಿ ಜೀವನೋಪಾಯಕ್ಕೆ ಕೂಲಿಗೆ ಹೋಗುವಂತಹ ಪರಿಸ್ಥಿತಿ ಇದ್ದು, ಇಂದು ಈ ಯೋಜನೆ ಮೂಲಕ ಆ ಕೊರತೆಯನ್ನು ನೀಗಿಸಿದಂತಾಗಿದೆ ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

08/01/2025 07:47 pm

Cinque Terre

180

Cinque Terre

0

ಸಂಬಂಧಿತ ಸುದ್ದಿ