ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಅಮರಶಿಲ್ಪಿ ಜಾಕಣಾಚಾರಿ ಶಿಲ್ಪಕಲೆಗಳಲ್ಲಿ ಇನ್ನೂ ಜೀವಂತ - ಡಿಸಿ ಎಂ. ಆರ್. ರವಿ

ಕೋಲಾರ: ಅಮರಶಿಲ್ಪಿ ಜಕಣಾಚಾರಿ ಅವರು ಶಿಲ್ಪ ಕಲೆಗೆ ಅಪಾರ ಕೊಡುಗೆ ನೀಡಿದ್ದು, ಸೂರ್ಯಚಂದ್ರ ಇರುವರೆಗೂ ಇವರ ಹೆಸರು ಅಮರವಾಗಿ ಇರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಇಂದು ಹಮ್ಮಿಕೊಂಡಿದ್ದ, ಅಮರ ಶಿಲ್ಪಿ ಜಕಣಾಚಾರಿ ಅವರು ಸಂಸ್ಮರಣಾ ದಿನಾರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಕನ್ನಡ ನಾಡಿನ ಇತಿಹಾಸದಲ್ಲಿ ಹೊಯ್ಸಳರು ತಮ್ಮದೇ ಆದ ಕೊಡುಗೆಯನ್ನು ಶಿಲ್ಪ ಕಲೆಗೆ ನೀಡಿದ್ದಾರೆ. ಇವರಲ್ಲಿ ವಿಷ್ಣುವರ್ಧನ ಅರಸನ ಕಾಲದಲ್ಲಿ ಕಲೆಯು ಉತ್ತುಂಗ ಶಿಖರದಲ್ಲಿತ್ತು. ವಿಷ್ಣುವರ್ಧನನ ಹೆಂಡತಿ ಶಾಂತಲೆ ನಾಟ್ಯ ರಾಣಿ ಎಂದು ಪ್ರಸಿದ್ಧಿಯಾಗಿದ್ದಳು. ಈ ಕಾಲದಲ್ಲಿದ್ದ ಅಮರಶಿಲ್ಪಿ ಜಕಣಾಚಾರಿ ಬೇಲೂರು ಹಳೆಬೀಡಿನ ಚನ್ನಕೇಶವ ದೇವಾಲಯದಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಿ ಹೆಸರಾಗಿದ್ದಾರೆ ಎಂದರು.

Edited By : PublicNext Desk
Kshetra Samachara

Kshetra Samachara

08/01/2025 07:21 pm

Cinque Terre

120

Cinque Terre

0

ಸಂಬಂಧಿತ ಸುದ್ದಿ