ಕೋಲಾರ: ಕೋಲಾರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೋಲಾರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಹೊರವಲಯದ ತೇರಹಳ್ಳಿಯ ಸುಲ್ತಾನ್ ತಿಪ್ಪಸಂದ್ರ ಬಳಿಯ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸಮೀರ್ ಪಾಷಾ, ತಮೀಮ್ ಖಾನ್, ಷಹೀದ್ ಪಾಷಾ ಎಂಬ ಆರೋಪಿಗಳನ್ನು ಬಂಧಿಸಿ. ಬಂಧಿತರಿಂದ 20,000 ಮೌಲ್ಯದ 5.4 ಗ್ರಾಂ ತೂಕದ ಎಂಡಿಎಂ ಮಾದಕ ಪದಾರ್ಥವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಇಎನ್ ಪೊಲೀಸ್ ಠಾಣೆಯ ಜಗದೀಶ್ ನೇತೃತ್ವದ ತಂಡವನ್ನು ಕೋಲಾರ ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್ ಶ್ಲಾಘಿಸಿದ್ದಾರೆ.
PublicNext
08/01/2025 06:04 pm