ಬಂಗಾರಪೇಟೆ : ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ 5,80,000 ರೂ ಮೌಲ್ಯದ 07 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಬೂದಿಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೂದಿಕೋಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಸುನಿಲ್ ಐರೋಡಗಿ ಮತ್ತು ಸಿಬ್ಬಂದಿ ಕೋಡಗುರ್ಕಿ ಕ್ರಾಸ್ ಬಳಿ ಕರ್ತವ್ಯದಲ್ಲಿದ್ದಾಗ ಅನುಮಾನಸ್ಪದವಾಗಿ ಇದ್ದ ವ್ಯಕ್ತಿ ಕದಿರೇನಹಳ್ಳಿ ಗ್ರಾಮದ ವಾಸಿ ಪ್ರವೀಣ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವಿವಿಧೆಡೆಗಳಲ್ಲಿ 07 ದ್ವಿಚಕ್ರ ವಾಹನಗಳನ್ನು ಈಗಾಗಲೇ ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು, ಆರೋಪಿ ಪ್ರವೀಣ್ ಕಡೆಯಿಂದ ಸುಮಾರು 5,80,000 ರೂ ಮೌಲ್ಯದ 07 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೂದಿಕೋಟೆ ಪೊಲೀಸ್ ತಿಳಿಸಿದ್ದಾರೆ.
Kshetra Samachara
31/12/2024 11:54 am