ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ನಕ್ಸಲರು ಮುಖ್ಯವಾಹಿನಿಗೆ ಬರಬೇಕು - ಸಚಿವ ದಿನೇಶ್ ಗುಂಡೂರಾವ್

ಮಾಲೂರು : ನಕ್ಸಲರ ಶರಣಾಗತಿ ಬಗ್ಗೆ ಬಿಜೆಪಿಯವರಿಗೆ ಏನು ಮಾತನಾಡ ಬೇಕು ಯಾವ ರೀತಿಯಾಗಿ ಮಾತನಾಡ ಬೇಕು ಎಂದು ಗೊತ್ತಿಲ್ಲ ನಕ್ಸಲರು ಶರಣಾಗತಿಯಾಗಿರುವುದು ಮುಕ್ತ ಕರ್ನಾಟಕ ಮಾಡುವುದಕ್ಕೆ ಇದು ಒಂದು ಹೆಜ್ಜೆಯಾಗಿದೆ ಎಂದು ಸಚಿವ ದಿನೇಶ್ ಗುಂಡುರಾವ್ ಅವರು ಹೇಳಿದರು.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು, ನಕ್ಸಲರು ಮುಖ್ಯವಾಹಿನಿಗೆ ಬರಬೇಕು, ಶಾಂತಿ ಸ್ಥಾಪನೆಯಾಗ ಬೇಕು ಹಾಗಾಗಿ ನಕ್ಸಲರು ಶರಣಾಗತಿಯಾಗಿದ್ದಾರೆ. ಬಿಜೆಪಿಯವರು ವಿಷಯ ಗೊತ್ತಿಲ್ಲದೆ ಟೀಕೆ ಮಾಡುವುದು ಸರಿಯಾಗಿಲ್ಲ. ಬಿಜೆಪಿಯವರಿಗೆ ಸಮಾಜದಲ್ಲಿ ಶಾಂತಿ ನೆಮ್ಮದಿ ಬೇಡವಾಗಿದೆ. ಅವರಿಗೆ ಹಿಂಸೆ ಇರಬೇಕು. ಬೆಂಕಿ ಹಚ್ಚೊದೆ ಕೆಲಸ ಇಲ್ಲ ಅಂದರೆ ಬೆಂಕಿಗೆ ತುಪ್ಪ ಹಾಕೋದೆ ಕೆಲಸವಾಗಿದೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿಯನ್ನು ನಡೆಸಿದರು.

Edited By : PublicNext Desk
PublicNext

PublicNext

09/01/2025 07:14 pm

Cinque Terre

8.41 K

Cinque Terre

0

ಸಂಬಂಧಿತ ಸುದ್ದಿ