ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಕೆಜಿಎಫ್ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು‌ ಆರೋಪಿಗಳನ್ನು ಅಂಡ್ರಸನ್ ಪೇಟೆ‌ ಪೊಲೀಸರು ಬಂಧಿಸಿ ಆವರಿಂದ‌ 1 ಕೆಜಿ 140‌ ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಜಿಎಫ್‌ನ ರೋಡ್ಜರ್ಸ್ ಕ್ಯಾಂಪ್ ಸ್ಮಶಾನದ ಮುಂಭಾಗದಲ್ಲಿರುವ ತಂಗುದಾಣದ ಬಳಿ ಗಾಂಜಾ‌ ಮಾರಾಟ‌ ಕುರಿತು ಖಚಿತ ಮಾಹಿತಿ ಮೇರೆಗೆ ಅಂಡ್ರಸನ್ ಪೊಲೀಸ್ ಠಾಣೆಯ ಪಿಎಸ್ ಐ ಮಂಜುನಾಥ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ‌ ಕೆಜಿಎಫ್ ‌ನಿವಾಸಿಗಳಾದ ಚಂದರ್ (27) ವರ್ಷ ಮತ್ತು ‌ಗೌತಮ್ (20) ವರ್ಷ ಎಂಬುವವರನ್ನು ಬಂಧಿಸಿ ಅವರಿಂದ 1 ಲಕ್ಷ ರೂ‌ ಮೌಲ್ಯದ 1ಕೆಜಿ 140 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು. ಇಬ್ಬರು‌ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

02/01/2025 08:54 pm

Cinque Terre

820

Cinque Terre

0

ಸಂಬಂಧಿತ ಸುದ್ದಿ