ಕೋಲಾರ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೋಲಾರ ಗಲ್ ಪೇಟೆ ಪೊಲೀಸರು ಬಂಧಿಸಿ ಅವರಿಂದ 5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಹೊರವಲಯದ ಟಮಕದ ನಡುಪಳ್ಳಿ ಕಡೆ ಹೋಗುವ ರಸ್ತೆಯ ಬಳಿ ಗಾಂಜಾ ಮಾರಾಟ ಕುರಿತು ಖಚಿತ ಮಾಹಿತಿ ಮೇರೆಗೆ ಗಲ್ ಪೇಟೆ ಸಿಪಿಐ ಲೋಕೇಶ್ ಎಂಜಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕೋಲಾರ ತಾಲೂಕಿನ ಅಜ್ಜಪ್ಪನಹಳ್ಳಿ ಗ್ರಾಮದ ನಾಗರಾಜ್ ಬಿನ್ ಗೋವಿಂದಪ್ಪ , ಶ್ರೀನಿವಾಸಪುರ ತಾಲೂಕಿನ ಸೀತರೆಡ್ಡಿಹಳ್ಳಿ ಗ್ರಾಮದ ನಾಗೇಂದ್ರ ಬಾಬು ಬಿನ್ ಲೇಟ್ ನಂಜುಂಡಪ್ಪ ಎಂಬುವವರು ಮಾರಾಟ ಮಾಡಲು ತಂದಿದ್ದ 5 ಲಕ್ಷ ರೂ ಮೌಲ್ಯದ 5 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರವರು ಶ್ಲಾಘಿಸಿದ್ದಾರೆ.
PublicNext
08/01/2025 05:53 pm