ಕೋಲಾರ : ಭಾರತ ದೇಶದ ಸಂವಿಧಾನ ಬಹಳ ಪವಿತ್ರವಾದದ್ದು ಎಲ್ಲರೂ ಸಮಾನವಾದ ಹಕ್ಕುಗಳನ್ನು ಪಡೆದು ನೆಮ್ಮದಿಯಾಗಿ ಬದುಕುವ ಹಕ್ಕನ್ನು ಸಂವಿಧಾನ ಕೊಟ್ಟಿದೆ ಎಂದು ವೇಮಗಲ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಬಿ.ಪಿ.ಮಂಜು ರವರು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಕೋಲಾರ ಹಾಗೂ ಹಳ್ಳಿ ಹಾಡು ಸಾಂಸ್ಕೃತಿಕ ಜಾನಪದ ಕಲಾಸಂಘ ರವರ ವತಿಯಿಂದ ಅಸ್ಪೃಶ್ಯತಾ ನಿವಾರಣ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವೇಮಗಲ್ ನಲ್ಲಿ ಎಸ್.ಸಿ /ಎಸ್.ಟಿ ಜನಾಂಗಕ್ಕೆ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾತಿ ವ್ಯವಸ್ಥೆಯನ್ನು ತೊರೆದು ಸಮಾನತೆಯಿಂದ ಬದುಕುವ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಮಾನತೆ ಸಾರಿ ಮೇಲು ಕೀಳು ಎಂಬ ಭೇದಭಾವ ಮಾಡದೆ ಮನುಷ್ಯನನ್ನು ಮನುಷ್ಯರಂತೆ ಕಾಣುವ ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿ ದೇಶದ ಯುವ ಜನತೆಗೆ ಇದೆ. ಯುವ ಜನತೆ ಎಚ್ಚೆತ್ತುಕೊಂಡ್ರೆ ಮಾತ್ರ ಜಾತಿ ವ್ಯವಸ್ಥೆಯನ್ನು ತೊಲಗಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಅಂತರಾಷ್ಟ್ರೀಯ ಗಾಯಕ ಕಲಾವಿದ ಮತ್ತಿಕುಂಟೆ ಕೃಷ್ಣ ಕಲಾವಿದ ಜಿ ಸುನಿಲ್ ಕುಮಾರ್ ಎ ಎಸ್ ಐ ಅನಿಲ್ ಕುಮಾರ್ ಚಿಕ್ಕ ರೆಡ್ಡಿಪ್ಪ ಅಂಬುಜ ಇನ್ನು ಅನೇಕ ಕಲಾವಿದರು ಇದ್ದರು.
Kshetra Samachara
07/01/2025 07:07 pm