ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಳಲ್ಕೆರೆ: ಸಚಿವ ಡಿ.ಸುಧಾಕರ್ ರಾಜೀನಾಮೆಗೆ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ಆಗ್ರಹ

ಹೊಳಲ್ಕೆರೆ: ಬಿ.ದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸೋಲಿಸಿದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಸುಧಾಕರ ಇವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ ಆಗ್ರಹಿಸಿದ್ದಾರೆ.

ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸಭೆ ನಡೆಸಿ ಮಾತನಾಡಿ, ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ನಾವೇಲ್ಲ ಹಗಲಿರುಳು ಪಕ್ಷದ ಕೆಲಸ ಮಾಡುತ್ತಿದ್ದೇವೆ. ಅದರೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪಕ್ಷದ ವಿರುದ್ಧ ನಿಲ್ಲುತ್ತಿದ್ದಾರೆ. ಇದರಿಂದಾಗಿ ಪಕ್ಷದ ಉದ್ಧಾರವಾಗುತ್ತಿಲ್ಲ. ಪಕ್ಷ ವಿರೋಧಿಗಳನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಡಿ.ಸುಧಾಕರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.

ಬಿದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಹೋರಾಟ ನಡೆಸಿ ಬಿಜೆಪಿ ಪ್ರಭಾವ ಇರುವ ಸ್ಥಳಗಳಲ್ಲಿ ಕಾಂಗೇಸ್ ಪಕ್ಷದ ಬೆಂಬಲದಿಂದ ಬಿ.ಎಸ್.ಮಾರುತಿ, ಪೂರ್ಣೀಮಾ, ಜಿ.ಎಸ್. ಪ್ರಕಾಶ್, ಗುರುಮೂರ್ತಿ ಗೋವಿಂದನಾಯ್ಕ, ಬಿ.ಕರಿಯಪ್ಪ ಇವರನ್ನು ಸಂಘದ ಸದಸ್ಯರನ್ನು ಆಯ್ಕೆ ಮಾಡಿದೆ. ಬಿಜೆಪಿ ಪಕ್ಷದ ಬೆಂಬಲ ದಿಂದ ಎ.ಓ.ರಾಜು, ಸತೀಶ್, ಬಸವಂತಪ್ಪ, ತ್ರೀವೇಣಿ, ಮಹಂತೇಶ್, ಈಶ್ವರಪ್ಪ ಆಯ್ಕೆಯಾಗಿದ್ದರು. ಅದರೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಪಕ್ಷದ ಬೆಂಬಲಿಗರಿಗೂ ಒಂದು ಮತದ ಕೊರತೆ ಇತ್ತು. ಆಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬ್ಯಾಂಕ್ ನಾಮನಿರ್ದೇಶಕ ಸದಸ್ಯರಿಗೂ ಮತದಾನಕ್ಕು ಅವಕಾಶ ಇದ್ದ ಹಿನ್ನಲೆಯಲ್ಲಿ ಕಾಂಗ್ರೇಸ್ ಬೆಂಬಲಿತರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭೇಟಿ ಮಾಡಿ, ಬ್ಯಾಂಕ್ ನಾಮನಿರ್ದೇಶಕ ಸದಸ್ಯರು ಕಾಂಗ್ರೇಸ್ ಪಕ್ಷದ ಬೆಂಬಲಿಗರಿಗೆ ಬೆಂಬಲಿಸುವಂತೆ ಸೂಚನೆ ನೀಡಬೇಕೆಂದು ಮನವಿ ಸಲ್ಲಿಸಿದ್ದರು.

ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರಾಜಿನಾಮೆ ನೀಡಬೇಕು. ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿಬೇಕೆಂದು ಆಗ್ರಹಿಸಿ, ಅವರ ವಿರುದ್ದ ಕೆಪಿಸಿಸಿ ದೂರು ನೀಡುತ್ತೇವೆಂದು ತಿಳಿಸಿದರು.

ಇದೆ ಸಮಯದಲ್ಲಿ ನಗರ ಘಟಕ ಅಧ್ಯಕ್ಷ ಮಜರ್ ಉಲ್ಲಾ ಖಾನ್, ಯುವ ಘಟಕದ ಅಧ್ಯಕ್ಷ ರಂಗಸ್ವಾಮಿ, ಪುರಸಭೆ ನಾಮನಿದೇರ್ಶಕ ಸದಸ್ಯ ಮಂಜುನಾಥ ಸಂಗನಗುಂಡಿ ಇದ್ದರು.

Edited By : PublicNext Desk
PublicNext

PublicNext

08/01/2025 07:39 pm

Cinque Terre

14.42 K

Cinque Terre

0

ಸಂಬಂಧಿತ ಸುದ್ದಿ