ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ : ಶ್ರೀನಗರದಲ್ಲಿ ಕರ್ತವ್ಯ ನಿರತ ಯೋಧ ಸಾವು: ಸಕಲ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ಬೈಲಹೊಂಗಲ : ಭಾರತೀಯ ಸೇನೆಯಲ್ಲಿ ಕಳೆದ 17 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ತಿಗಡಿ ಗ್ರಾಮದ ವೀರ ಯೋಧ ಶ್ರೀನಗರ ದಲ್ಲಿ ಕರ್ತವ್ಯದ ನಿರತರಾಗಿದ್ದಾಗ ಹೃದಯಾಘಾತದಿಂದ ಮೃತಪಟ್ಟ ಹಿನ್ನಲೆ ಸ್ವಗ್ರ್ರಾಮದಲ್ಲಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ಬುಧವಾರ ನಡೆಸಲಾಯಿತು.

ತಾಲೂಕಿನ ತಿಗಡಿ ಗ್ರಾಮದ ಮಹಾಂತೇಶ ಭೈರನಟ್ಟಿ (43)ಹೃದಯಾಘಾತದಿಂದ ನಿಧನರಾದ ಯೋಧ. ಇವರು ಜಮ್ಮು ಕಾಶ್ಮೀರದ ಶ್ರೀನಗರದ ಎಸ್ ಎಸ್ ಬಿ 10 ನೇ ಬಟಾಲಿಯನ್ ನಲ್ಲಿ ಕಳೆದ 17 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ ಲಕ್ಷ್ಮಿ ಭೈರನಟ್ಟಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ವೀರಯೋಧ ಹೃದಯಾಘಾತ ಸುದ್ದಿ ತಿಳಿದ ಇಡೀ ತಿಗಡಿ ಗ್ರಾಮದಲ್ಲಿ ಸ್ಮಶಾನ ಮೌನ ಅವರಿಸಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಅಮರ ರಹೇ ಅಮರ ರಹೇ ಮಹಾಂತೇಶ ಅಮರ ರಹೇ ಎಂದು ಘೋಷಣೆ ಮೊಳಗಿ ದವು. ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜದೊಂದಿಗೆ ಗೌರವ ಸಮರ್ಪಿಸಿ, ಅಂತ್ಯೆಕ್ರಿಯೆ ನಡೆಸಲಾಯಿತು. ಕುಟುಂಬಸ್ಥರ ರೋಧನ ಮುಗಿಲು ಮುಟ್ಟುವಂತಾಗಿತು.

ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡಗೌಡ್ರ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ತಹಶೀಲ್ದಾರ್ ಎಚ್ ಎನ್ ಶಿರಹಟ್ಟಿ, ಗ್ರಾ ಪಂ ಅಧ್ಯಕ್ಷೆ ಕಲ್ಪನಾ ಡೊಂಕನವರ, ಗ್ರಾಮ ಲೆಕ್ಕಾಧಿಕಾರಿ ಛತ್ರಪತಿ ನಾಯಕ, ಮಾಜಿ ಸೈನಿಕರು ಹಾಗೂ ಗ್ರಾಮಸ್ಥರು ಅಂತಿಮ ದರ್ಶನ ಪಡೆದರು.

Edited By : Ashok M
PublicNext

PublicNext

08/01/2025 05:46 pm

Cinque Terre

35.69 K

Cinque Terre

1

ಸಂಬಂಧಿತ ಸುದ್ದಿ