ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಸುಕ್ಷೇತ್ರ ಇಂಚಲ ಡಾ. ಶಿವಾನಂದ ಭಾರತಿ ಶ್ರೀಗಳ ಅದ್ದೂರಿ ಮಹಾರಥೋತ್ಸವ

ಬೈಲಹೊಂಗಲ: ಸುಕ್ಷೇತ್ರ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿಯವರ 85 ನೇ ವರ್ಧoತಿ ಮಹೋತ್ಸವ, 55 ನೇ ಅಖಿಲಭಾರತ ವೇದಾಂತ ಪರಿಷತ್, 55 ನೇ ವರ್ಷದ ಪೀಠಾರೋಹಣ ನಿಮಿತ್ತ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಗಳ ರಜತ ರಥೋತ್ಸವ, ಶಿವಯೋಗೀಶ್ವರರ ಮಹಾರಥೋತ್ಸವ ಗುರುವಾರ ಸಂಜೆ ಸಹಸ್ರಾರು ಸದ್ಭಕ್ತರ ನಡುವೆ ಅದ್ದೂರಿಯಾಗಿ ಜರುಗಿತು.

ಕಬ್ಬು, ಬಾಳೆ, ತೆಂಗು, ತಳಿರು ತೋರಣಗಳಿಂದ ಶೃಂಗಾರಗೊಂಡ ರಥಕ್ಕೆ, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ಜಡಿಮಠದ ರಮಾನಂದ ಸ್ವಾಮೀಜಿ, ಮಲ್ಲಾಪೂರ ಚಿದಾನಂದ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ಕುಳ್ಳೂರ ಬಸವಾನಂದ ಸ್ವಾಮೀಜಿ, ರಜತ ರಥೋತ್ಸವ ಹಾಗೂ ಮಹಾರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಭಕ್ತರು ರಥಗಳಿಗೆ ಹೂ, ಹಣ್ಣು, ಕಾಯಿ, ಕಾರಿಕ, ನೈವೇದ್ಯ ಅರ್ಪಿಸಿ ಭಕ್ತಿಭಾವ ಮೆರೆದರು. ರಥಗಳನ್ನು ವಿವಿಧ ಹೂಮಾಲೆಗಳಿಂದ, ಬಣ್ಣ ಬಣ್ಣದ ಕಾಗದಗಳಿಂದ ಅಲಂಕರಿಸಲಾಗಿತ್ತು. ವಿವಿಧ ವಾದ್ಯ ಮೇಳಗಳು ರಥೋತ್ಸವಕ್ಕೆ ಕಳೆ ತಂದವು.

ಎರಡು ರಥಗಳಲ್ಲಿ ಡಾ.ಶಿವಾನಂದ ಭಾರತಿ ಶ್ರೀಗಳು ಆಸೀನರಾಗಿ ಭಕ್ತರನ್ನು ಹರಸಿದರು. ಹರ, ಹರ, ಮಹಾದೇವ, ಶಿವಯೋಗೀಶ್ವರ ಮಹಾರಾಜಕೀ ಜೈ, ಸಕಲ ಸಾಧು ಸಂತ ಮಹಾರಾಜಕೀ ಜೈ ಎಂಬ ಜಯಘೋಷಗಳು ಮುಗಿಲು ಮುಟ್ಟುವಂತಾಗಿತ್ತು. ಶ್ರೀಗಳ ದರ್ಶನ ಭಾಗ್ಯ ಪಡೆದ ಭಕ್ತರು ಪುನೀತರಾದರು.

ಶರೀಫ ನದಾಫ, ಪಬ್ಲಿಕ್ ನೆಕ್ಸ್ಟ್, ಬೈಲಹೊಂಗಲ

Edited By : Suman K
Kshetra Samachara

Kshetra Samachara

03/01/2025 01:11 pm

Cinque Terre

44.72 K

Cinque Terre

0

ಸಂಬಂಧಿತ ಸುದ್ದಿ