ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರದ ಸೌಲಭ್ಯಗಳನ್ನು ರೈತ ಸದಸ್ಯರಿಗೆ ಒದಗಿಸಿ : ಡಾ ವಿಶ್ವನಾಥ ಪಾಟೀಲ

ಬೈಲಹೊಂಗಲ : ಸರಕಾರದ ಸೌಲಭ್ಯಗಳನ್ನು ರೈತ ಸದಸ್ಯರಿಗೆ ಸಹಕಾರಿ ಸಂಘಗಳು ಒದಗಿಸಿ ಅವರ ಆರ್ಥಿಕ ಜೀವನಮಟ್ಟ ಸುಧಾರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದ ವಿದ್ಯಾನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ತಾಲೂಕಿನ ದೊಡವಾಡ ಗ್ರಾಮದ ಶತಮಾನೋತ್ಸವ ಸಂಸ್ಥೆ ಶ್ರೀ ಸಂಗಮೇಶ್ವರ ಪಿಕೆಪಿಎಸ್‌ನ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ಪ್ರತಿನಿಧಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಪಿಕೆಪಿಎಸ್ ಸಹಕಾರ ಸಂಘ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಎಲ್ಲ ಸದಸ್ಯರ, ಗ್ರಾಮಸ್ಥರ ವಿಶ್ವಾಸ ತೆಗೆದುಕೊಂಡು ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದರು.

ಶ್ರೀ ಸಂಗಮೇಶ್ವರ ಪಿಕೆಪಿಎಸ್ ಸಹಕಾರ ಸಂಘದ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ಉಪಾಧ್ಯಕ್ಷ ಗುರುನಾಥ ತಡಕೋಡ ಮಾತನಾಡಿ, ದೊಡವಾಡ ಹಾಗೂ ನನಗುಂಡಿಕೊಪ್ಪ ಗ್ರಾಮಗಳ ಎಲ್ಲ ರೈತರ ಮತ್ತು ನಾಗರೀಕರ ಸಹಕಾರದೊಂದಿಗೆ ಸಂಸ್ಥೆಯ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇವೆ. ಜಿಲ್ಲೆಯ ಮತ್ತು ತಾಲೂಕಿನ ಜನಪ್ರತಿನಿಧಿಗಳ ಮಾರ್ಗದರ್ಶನ ಮತ್ತು ಸಹಕಾರ ಪಡೆದು ಸಂಘವನ್ನು ಅತ್ಯುತ್ತಮ ಸಹಕಾರಿಯಾಗಿಸಲು ಶ್ರಮಿಸುವುದಾಗಿ ಹೇಳಿದರು.

ಇದೇ ವೇಳೆ ಶ್ರೀ ಸಂಗಮೇಶ್ವರ ಪಿಕೆಪಿಎಸ್ ಸಹಕಾರ ಸಂಘದ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ಉಪಾಧ್ಯಕ್ಷ ಗುರುನಾಥ ತಡಕೋಡ, ನಿರ್ದೇಶಕ ಅಜ್ಜಪ್ಪ ಪಟಾತ, ಬಸವರಾಜ ಮುರಗೋಡ, ಗಿರೀಶ ಧಾರವಾಡ, ಲಕ್ಕಪ್ಪ ಅಲಕ್ಕನವರ, ಗದಿಗೆಪ್ಪ ದೊಡಮನಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಾ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ನಾಗನಗೌಡ ಭರಮಗೌಡರ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/01/2025 01:13 pm

Cinque Terre

2.88 K

Cinque Terre

0

ಸಂಬಂಧಿತ ಸುದ್ದಿ