ಬೈಲಹೊಂಗಲ: ತಾಲೂಕಿನ ವಣ್ಣೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ರೈತ ಅಭಿವೃದ್ಧಿ ಪೆನಲ್‍ನ ಬಾಳಾಸಾಹೇಬ ದೇಸಾಯಿ ಹಾಗೂ ಉಪಾಧ್ಯಕ್ಷರಾಗಿ ನಾಗಪ್ಪ ಬಶೆಟ್ಟಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಮಾತನಾಡಿ, ಬಾಳಾಸಾಹೇಬ ದೇಸಾಯಿಯವರು ರೈತರ ಏಳ್ಗೆಗೆ ಶ್ರಮಿಸುತ್ತಿರುವುದರಿಂದ ಸತತವಾಗಿ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದರು.
ನೂತನ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ರೈತರ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬೈಲಹೊಂಗಲ ಟಿಎಪಿಎಂಸಿ ನಿದೇಶಕ ಕುಮಾರಗೌಡ ಪಾಟೀಲ, ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ರವಿರಾಜ ಇನಾಮದಾರ, ಬೈಹೊಂಗಲ ಡಿಸಿಸಿ ಬ್ಯಾಂಕ ಟಿಸಿಒ ವಿ.ಬಿ.ಗೀರನವರ, ಬ್ಯಾಂಕ ನಿರೀಕ್ಷಕ ಸುರೇಶ ಮತ್ತಿಕೊಪ್ಪ, ವೀರಣ್ಣ ದೇಸಾಯಿ, ಆನಂದ ಕಿರಗಿ,ಹಣಮಂತ ದೊಡ್ಡಣ್ಣವರ, ಮಾಜಿ ತಾಪಂ ಸದಸ್ಯ ಬಸವರಾಜ ಅಂಗಡಿ, ಬೀಮಪ್ಪ ಸೋಮನಟ್ಟಿ, ಯಲ್ಲಪ್ಪ ಚಿಕ್ಕೊಪ್ಪ, ನಾಗಪ್ಪ ಶೇಬಣ್ಣವರ, ನಿಂಗಪ್ಪ ಹೊಮನಿ, ಶಿವಲಿಂಗ ಹೊಳಿ, ಸೋಮಪ್ಪ ಬಶೆಟ್ಟಿ, ವಜ್ರಕಾಂತ ಕುಲಕರ್ಣಿ, ಚಂಬಣ್ಣ ಗುತ್ತಿಗೊಳಿ, ಚುಣಾವಣಾಧಿಕಾರಿ ರಾಘವೇಂದ್ರ ಪಾಟೀಲ, ಕಾರ್ಯದರ್ಶೀ ಆರ್.ಎಸ್.ಹೊಸಮನಿ, ಶಂಕರ ದನದ ಹಾಗೂ ವಣ್ಣೂರ, ಮಾಸ್ತಮರ್ಡಿ ಹಾಗೂ ಸುಣಕುಂಪಿ ಗ್ರಾಮಸ್ತರು ಉಪಸ್ಥಿತರಿದ್ದರು.
Kshetra Samachara
06/01/2025 11:23 am