ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಜಿಲ್ಲಾಡಳಿತದ ವಿರೋಧ ಮಧ್ಯೆಯೂ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ

ಬೆಳಗಾವಿ: ಬೆಳಗಾವಿಯ ಅನಗೋಳದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಅನುಮತಿ ದೊರಕದಿದ್ದರೂ ಜಿಲ್ಲಾಡಳಿತದ ವಿರೋಧದ ನಡುವೆಯೂ ಭಾನುವಾರ ಸಂಜೆ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಮೂರ್ತಿ ಅನಾವರಣ ಮಾಡಲಾಯಿತು.

ಕಳೆದ ಐದಾರು ದಿನದಿಂದ ಬೆಳಗಾವಿಯ ಅನಗೋಳದ ಡಿವಿಎಸ್ ಚೌಕ್ ನಲ್ಲಿನ 21 ಅಡಿ ಎತ್ತರದ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ಮಾಡಲು ಬಿಜೆಪಿ ಶಾಸಕ ಅಭಯ ಪಾಟೀಲ್ ಹಾಗೂ ಪಾಲಿಕೆ ಸದಸ್ಯರು ತಯಾರಿ ನಡೆಸಿದ್ದರು.

ಜಿಲ್ಲಾಧಿಕಾರಿಗಳು ಶನಿವಾರ ಸಭೆ ನಡೆಸಿ ಪುತ್ಥಳಿ ಅನಾವರಣ ಮುಂದೂಡುವ ಪ್ರಯತ್ನ ಮಾಡಿದ್ದರು. ಹೀಗಾಗಿ ಎರಡು ಗುಂಪುಗಳ ನಡುವೆ ಜಟಾಪಟಿ ಮುಂದುವರಿದಿದ್ದರಿಂದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಜಿಲ್ಲಾಡಳಿತದ ವಿರೋಧದ ನಡುವೆ ಮೂರ್ತಿ ಅನಾವರಣ ಮಾಡುವುದಾಗಿ ಶಾಸಕ ಅಭಯ ಪಾಟೀಲ್ ಘೋಷಣೆ ಮಾಡಿ, ಅನಗೋಳ ನಾಕಾದಿಂದ ಭವ್ಯ ಶೋಭಾಯಾತ್ರೆ ನಡೆಸುವ ಮೂಲಕ ಪುತ್ಥಳಿ ಅನಾವರಣ ಮಾಡಿದರು. ಇದೇ ರೀತಿ ಶೋಭಾ ಯಾತ್ರೆಯುದ್ದಕ್ಕೂ ಘೋಷಣೆಗಳು ಮೊಳಗಿದವು. ಕೇಸರಿ ಸೀರೆಯಲ್ಲಿದ್ದ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸಾಗಿದರು. ಡೋಲು ತಾಶಾಗಳ ಅಬ್ಬರ ಜೋರಾಗಿತ್ತು.ಎತ್ತ ನೋಡಿದರೂ ಜನಸಾಗರವೇ ಕಣ್ಣಿಗೆ ರಾಚುತ್ತಿತ್ತು. ಪಟಾಕಿ, ಸಿಡಿಮದ್ದುಗಳು ಮೆರವಣಿಗೆಗೆ ಮೆರುಗು ತಂದವು.

ಛತ್ರಪತಿ ಸಂಭಾಜಿ ಮಹಾರಾಜರ ಪುತ್ಥಳಿಗೆ ಕ್ಷೀರಾಭಿಷೇಕ ಮಾಡಿ ಶಿವಾಜಿ ಮಹಾರಾಜರ 13ನೇ ವಂಶಸ್ಥ ಶಿವೇಂದ್ರರಾಜೇ ಭೋಸ್ಲೆ ಅವರು ಪುತ್ಥಳಿ ಅನಾವರಣ ನೆರವೇರಿಸಿದರು. ಈ ವೇಳೆ ಶಿವಾಜಿ ಮಹಾರಾಜ್ ಕೀ ಜೈ, ಸಂಭಾಜಿ ಮಹಾರಾಜ್ ಕೀ ಜೈ ಎಂಬ ಘೋಷಣೆಗಳನ್ನು ಹಾಕಿ ನೆರೆದಿದ್ದ ಸಹಸ್ರಾರು ಜನರು ಸಂಭ್ರಮಿಸಿದರು.

Edited By : Manjunath H D
PublicNext

PublicNext

05/01/2025 10:52 pm

Cinque Terre

39.44 K

Cinque Terre

1

ಸಂಬಂಧಿತ ಸುದ್ದಿ