ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ ಕಾನ್ಸ್‌ಟೇಬಲ್

ಬೆಳಗಾವಿ: ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್ ಆತ್ಮಹತ್ಯೆಗೆ ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಬೆಳಗಾವಿನ ನಗರದ ಉದ್ಯಾಮಭಾಗ ಪೊಲೀಸ್ ಠಾಣೆಯಲ್ಲಿ ನಡೆದಿದೆ.‌

ಬೆಳಗಾವಿಯ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಪೇದೆ ಮುದಕಪ್ಪ ಉದಗಟ್ಟಿ ಆತ್ಮಹತ್ಯೆಗೆ ಯತ್ನಿಸಿದಂತೆ ಡ್ರಾಮಾ ಮಾಡಿದ್ದಾನೆ. ಕಳೆದ ಎರಡು ತಿಂಗಳಿನಿಂದ ಗಸ್ತು (ಶಕ್ತಿ) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೇದೆ, ಎರಡು ದಿನ ರಜೆ ಹೋಗಿ ನಿನ್ನೆ ಕರ್ತವ್ಯಕ್ಕೆ ಹಾಜರಾಗಿದ್ದರು. ಬಳಿಕ ಬಂದೋಬಸ್ತ್ ಡ್ಯೂಟಿ ಹಾಕಿದ್ದಕ್ಕೆ ಕಾನ್ಸ್‌ಟೇಬಲ್ ಮುದಕಪ್ಪ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ್ದಾನೆ. ಠಾಣೆಯಲ್ಲಿ ಬಿದ್ದು ಆತ್ಮಹತ್ಯೆಯ ನಾಟಕವಾಡಿ ಚೀರಾಟ ಮಾಡಿದ್ದಾನೆ.‌ ತಕ್ಷಣವೆ ಮುದಕಪ್ಪನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಆಸ್ಪತ್ರೆಯಲ್ಲಿ ತಪಾಸಣೆ ಬಳಿಕ ಯಾವುದೆ ರೀತಿಯ ವಿಷ ಪದಾರ್ಥ ಸೇವನೆ ಮಾಡಿಲ್ಲ ಎಂಬುದು ಸಾಬೀತಾಗಿದ್ದು, ತಕ್ಷಣವೆ ಡಿಸ್ಚಾರ್ಜ್ ಮಾಡಿ ಪೇದೆಯನ್ನು ಮನೆಗೆ ಕಳುಹಿಸಲಾಗಿದೆ.‌

Edited By : Nagesh Gaonkar
PublicNext

PublicNext

02/01/2025 11:13 am

Cinque Terre

46.62 K

Cinque Terre

0

ಸಂಬಂಧಿತ ಸುದ್ದಿ