ಬೆಳಗಾವಿ : ಪುತ್ಥಳಿ ಅನಾವರಣಕ್ಕೆ ಅನುಮತಿ ಕೊಡದಿದ್ದರೇ ಅನಗೋಳ ಚಲೋ ಕರೆ ಕೊಡುವುದಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಛತ್ರಪತಿ ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣ ಪೈಟ್ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಬಿಜೆಪಿ ಶಾಸಕ ಅಭಯ ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳಿಗೆ ಶಾಸಕ ಅಭಯ ಪಾಟೀಲ ಪ್ರತಿಕ್ರಿಯೆ ನೀಡಿದ್ದು, ಆನಗೋಳದಲ್ಲಿ ನಿರ್ಮಾಣವಾದ ಮೂರ್ತಿ ಕೆಲಸ ಮುಗಿದಿದೆ, ಅಪೂರ್ಣ ಆಗಿಲ್ಲ. ಮೂರ್ತಿ ಅನಾವರಣಕ್ಕೆ ಯಾವುದೇ ವಿರೋಧ ಇಲ್ಲ. ಮೂರ್ತಿ ಉದ್ಘಾಟನೆ ಮಾಡೊದಕ್ಕೆ ಯಾವುದೇ ಸಮಸ್ಯೆ ಇಲ್ಲ ಎನ್ ಓ ಸಿ ಕೊಟ್ಟಿರುವ ಲೇಟರ್ ಇದೆ. ಕಾರ್ಯಕ್ರಮಕ್ಕೆ ಛತ್ರಪತಿ ಶಿವಾಜಿ ಮಹಾರಾಜರು 13ನೇ ವಂಶಸ್ಥರು ಆಹ್ವಾನ ಕೊಟ್ಟಿದ್ದೇವೆ. ಅಧಿಕಾರಿಗಳಿಗೆ ಯಾರು ಹೇಳಿದ್ದಾರೋ ಗೊತ್ತಿಲ್ಲ,ಅನಾವರಣಕ್ಕೆ ಅನುಮತಿ ಕೊಟ್ಟಿಲ್ಲ.
ಇನ್ನು ಸ್ವಾಗತಕೋರಿ ಹಾಕಿರುವ ಬ್ಯಾನರ್ ಗಳನ್ನು ತೆರವು ಮಾಡಿದ್ದಾರೆ. ಸಂಭಾಜಿ ಭಾವಚಿತ್ರ ಇರೋ ಬ್ಯಾನರ್ ಪಾಲಿಕೆ ಅಧಿಕಾರಿಗಳು ತೆಗೆದು ಹಾಕಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ, ಇವರಿಗೆ ಹಿಂದೂಗಳ ಪೋಸ್ಟರ್ ಬೇಡವಾಗಿದೆ. ಮೂರ್ತಿ ಅನಾವರಣ ವಿಚಾರಕ್ಕೆ ಡಿಸಿ ಭೇಟಿಯಾಗಿ ಚರ್ಚೆ ಮಾಡುತ್ತೇವೆ. ಅನುಮತಿ ಕೊಡದಿದ್ದರೆ ಬೆಳಗಾವಿ ಚಲೋ ಕಾರ್ಯಕ್ರಮಕ್ಕೆ ನಿರ್ಧಾರಿಸಲಾಗಿದೆ ಎಂದರು.
PublicNext
04/01/2025 12:52 pm