ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ಅಭಿಲೇಖಾಲಯದ ಡಿಜಿಟಲೀಕರಣಕ್ಕೆ ಚಾಲನೆ

ಸಿದ್ದಾಪುರ: ಇಲ್ಲಿಯ ತಾಲೂಕಾ ಆಡಳಿತ ಸೌಧದಲ್ಲಿ ಪ್ರಾರಂಭಿಸಲಾದ ಅಭಿಲೇಖಾಲಯದ ಡಿಜಿಟಲಿಕರಣಕ್ಕೆ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಬುಧವಾರ ಚಾಲನೆ ನೀಡಿದರು.

ಹಳೆಯ ಭೂದಾಖಲೆಗಳನ್ನು ಗಣಕೀಕರಣಗೊಳಿಸುವ ಅಭಿಲೇಖಾಲಯದ ಡಿಜಿಟಲಿಕರಣ ಕೊಠಡಿಗೆ ಚಾಲನೆ ನೀಡಿದ ಶಾಸಕ ಭೀಮಣ್ಣ ನಾಯ್ಕ ರೈತರ ಭೂದಾಖಲೆಗಳನ್ನು ಒಂದು ತಪ್ಪದಂತೆ ಡಿಜಿಟಲಿಕರಣ ಮಾಡಿ ಗೌಪ್ಯವಾಗಿಡಬೇಕು ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.

ಈ ವೇಳೆ ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ಇಲಾಖೆಯ ಜಿ.ಎಲ್.ಶ್ಯಾಮಸುಂದರ, ಸಂಗೀತಾ ಭಟ್, ಡಿ.ಎಂ.ನಾಯ್ಕ, ಭೂ ನ್ಯಾಯ ಮಂಡಳಿ ಸದಸ್ಯ ಎಚ್.ಕೆ‌.ಶಿವಾನಂದ, ಸಿಪಿಐ ಜೆ.ಬಿ.ಸೀತಾರಾಮ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

08/01/2025 05:20 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ