ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ತಾಲೂಕಿನ ವಿವಿದೆಡೆ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣವಾದ ನೂತನ ಕಾಲುಸಂಕಗಳನ್ನು ಉದ್ಘಾಟಿಸಿದರು.
ಬಿದ್ರಕಾನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳದೋಟ ಕಾಲುಸಂಕ, ಬಿಳಗಿ ಗ್ರಾಪಂ ವ್ಯಾಪ್ತಿಯ ಕಳೂರು ಕಾಲುಸಂಕ, ಕ್ಯಾದಗಿ ಗ್ರಾಪಂನ ಇಳ್ಳಿಮನೆ, ಇಟಗಿ ಗ್ರಾಪಂನ ವಾಟಗಾರ, ವರ್ತೆಕೊಡ್ಲು, ವಾಜಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸಾಳಮಕ್ಕಿ ಗ್ರಾಮದ ಕಾಲುಸಂಕ, ಹಲಗೇರಿ ಗ್ರಾಪಂನ ಬ್ಯಾಟಗೋಡ ಗ್ರಾಮದ ಕಾಲುಸಂಕವನ್ನು ಉದ್ಘಾಟಿಸಿದರು. ವಾಜಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಿಳಸೆಕುಂಬ್ರಿಯಲ್ಲಿ ನಿರ್ಮಾಣಗೊಳ್ಳಲಿರುವ ಕಾಲುಸಂಕದ ಶಿಲನ್ಯಾಸ ನೆರವೇರಿಸಿದರು.
Kshetra Samachara
07/01/2025 08:23 pm