ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ - ಪೊಲೀಸ್‌ ವಿರುದ್ಧ ಸಿಡಿದೆದ್ದ ವಿಶ್ವಕರ್ಮ ಸಮುದಾಯ

ಬೀದರ್: ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿತುಗಾಂವ ಗ್ರಾಮದ ನಿವಾಸಿ ಪ್ರಥಮ ದರ್ಜೆಯ ಗುತ್ತಿಗೆದಾರ ಸಚಿನ್ ಪಾಂಚಾಳ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬೇರೆ ಯಾವುದೇ ಸಮುದಾಯದ ಗುತ್ತಿಗೆದಾರ ಈ ರೀತಿಯಲ್ಲಿ ಸಾವನ್ನಪ್ಪಿದ್ದರೆ, ಇಡೀ ಕರ್ನಾಟಕವೇ ಹೊತ್ತಿ ಉರಿಯುತ್ತಿತ್ತು. ನಮ್ಮ ವಿಶ್ವಕರ್ಮ ಸಮುದಾಯಕ್ಕೆ ಧ್ವನಿ ಇಲ್ಲದ ಕಾರಣಕ್ಕೆ ರಾಜಕೀಯ ಪಕ್ಷಗಳು ಹೀಗೆ ನಡೆದುಕೊಳ್ಳುತ್ತಿವೆ ಎಂದು ವಿಶ್ವಕರ್ಮ ಮಹಾ ಒಕ್ಕೂಟ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವಕರ್ಮ ಮಹಾ ಒಕ್ಕೂಟ ಮುಖಂಡರು, 'ವಿಶ್ವಕರ್ಮ ಸಮುದಾಯದ 26 ವರ್ಷದ ಈ ಯುವಕ ಸಣ್ಣ ಪುಟ್ಟ ಗುತ್ತಿಗೆಗಳನ್ನು ನಿರ್ವಹಿಸುತ್ತಾ ಬಂದಿದ್ದರು. ಆದರೆ ಗುತ್ತಿಗೆ ಕೊಡಿಸುವ ಪ್ರಕರಣವೊಂದರಲ್ಲಿ ನಡೆದ ಹಣಕಾಸಿನ ವ್ಯವಹಾರ ಸಚಿನ್ ಸಾವಿನಲ್ಲಿ ಅಂತ್ಯವಾಗಿದೆ' ಎಂದರು.

ಸಚಿನ್ ಪಾಂಚಾಳ್ ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್‌ ನೋಟ್‌ ನಲ್ಲಿ ಕೆಲವರ ಹೆಸರುಗಳನ್ನು, ತನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ. ಇದೇ ವ್ಯಕ್ತಿಗಳೂ ಸಚಿನ್ ಪಾಂಚಾಳ್ ಅವರನ್ನು ಬೆದರಿಸಿದ್ದು, ಈ ಸಂಬಂಧ ಬೀದರ್ ನಗರದ ಗಾಂಧಿ ಗಂಜಿ ಪೊಲೀಸ್ ಠಾಣೆಯಲ್ಲಿ ಹಾಗೂ ಭಾಲ್ಕಿ ತಾಲೂಕಿನ ಧನ್ನೂರ್ (ಹೆಚ್) ಪೊಲೀಸ್ ಠಾಣೆಯಲ್ಲಿ ಸಚಿನ್ ಸೋದರಿಯರು ದೂರು ನೀಡಲು ತೆರಳಿದಾಗ, ಅತ್ಯಂತ ತಾತ್ಸಾರದಿಂದ ನಡೆದಿಕೊಂಡಿದ್ದು ದೂರು ದಾಖಲಿಸದೇ ಹಿಂದಕ್ಕೆ ಕಳಿಸಿದ್ದರು. ಸುರಕ್ಷತೆ ಮತ್ತು ಪ್ರಾಣಭಯದಲ್ಲಿರುವ ಕುಟುಂಬವೊಂದು ದೂರು ನೀಡಿದಾಗ, ದಾಖಲಿಸದೇ ಇರಲು ಕಾರಣವೇನು? ಅಂದು ದೂರು ದಾಖಲಿಸಿಕೊಂಡಿದ್ದರೆ ಸಚಿನ್ ಬದುಕುಳಿಯುತ್ತಿದ್ದ ಎಂಬುದು ಕುಟುಂಬದ ಅಳಲು. ಆದರೆ ಈಗ ಕಾಲ ಮಿಂಚಿ ಹೋಗಿದೆ, ಸಚಿನ್ ಸಾವಿನಿಂದಾಗಿ ಕುಟುಂಬ ಅನಾಥವಾಗಿದೆ. ಪ್ರಕರಣ ತೀವ್ರ ಚರ್ಚೆಗೀಡಾಗಿ ಒತ್ತಡ ಸೃಷ್ಟಿಯಾದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೆಲ್ಲಕ್ಕೂ ಪೊಲೀಸರ ಕರ್ತವ್ಯಲೋಪ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದು ಗಂಭೀರ ಆರೋಪ ಮಾಡಿದರು.

ಸಚಿನ್ ಪಾಂಚಾಳ್ ಕುಟುಂಬದಲ್ಲಿ ಆತನೊಬ್ಬನೇ ಆಧಾರ. ಇನ್ನು ವಿವಾಹವಾಗಬೇಕಾದ ಇಬ್ಬರು ಸೋದರಿಯರಿದ್ದಾರೆ. ಸ್ವತಃ ಸಚಿನ್ ಅವಿವಾಹಿತ. ಈಗ ಸಚಿನ್ ಸಾವಿನಿಂದಾಗಿ ಸಾಮಾನ್ಯ ಹಾಗೂ ಬಡ, ಮಹಿಳೆಯರಿಂದ ಕೂಡಿದ ಸಾಮಾಜಿಕವಾಗಿ ಹಿಂದುಳಿದ ಕುಟುಂಬವೊಂದು ದಿಕ್ಕೆಟ್ಟು ನಿಂತಿದೆ. ಸೂಕ್ತ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ದೂರು ಸ್ವೀಕರಿಸಿ, ಸ್ಪಂದಿಸಿದ್ದರೆ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಬದುಕುಳಿಯುತ್ತಿದ್ದರು. ಇಂತಹ ಘಟನೆಗಳಿಂದ ಸಾರ್ವಜನಿಕರಲ್ಲಿ ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆಯೇ ಕುಸಿದು ಹೋಗುತ್ತದೆ. ಹಾಗಾಗಿ ತಾವು ಕೂಡಲೇ ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಚಿನ್ ಪಾಂಚಾಳ್ ಕುಟುಂಬ ಹಾಗೂ ಸಮಸ್ತ ವಿಶ್ವಕರ್ಮ ಸಮುದಾಯದ ಪರವಾಗಿ, ವಿಶ್ವಕರ್ಮ ಮಹಾ ಒಕ್ಕೂಟವು ಈಶಾನ್ಯ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಅಜಯ್ ಹಿಲೋರಿ ಅವರಿಗೆ ಆಗ್ರಹಿಸಿದ್ದಾರೆ.

ಸಚಿನ್ ಪಾಂಚಾಳ ಆತ್ಮಹತ್ಯೆಯಾಗಿ ಇಂದಿಗೆ ಏಳು ದಿನಕಳೆದರೂ ಕುಟುಂಬದಲ್ಲಿ ಸೂತಕದ ಚಾಯೆ ಇದ್ದರೂ ಸಂಕಷ್ಟದ ಸ್ಥಿತಿಯಲ್ಲಿ ಇದ್ದರೂ ಕೆಲವು ಪ್ರತಿಷ್ಠಿತರು ಮನಬಂದಂತೆ ಮಾತನಾಡಿಸುತ್ತಿದ್ದಾರೆ. ಅವರಿಗೆ ಸ್ವಲ್ಪವಾದರು ಮನುಷ್ಯತ್ವ ಇಲ್ಲವೇ? ನಮ್ಮ ವಿಶ್ವಕರ್ಮ ಮಹಾ ಒಕ್ಕೂಟ ರಾಜ್ಯ ಘಟವು ಸಚಿನ್ ಪಾಂಚಾಳ ಟೆಂಡರ್ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಕುಟುಂಬಕ್ಕೆ ಮಾನವೀಯತೆಯ ಆಧಾರದ ಮೇಲೆ, ಕನಿಷ್ಠ ಒಂದು ಕೋಟಿ ರೂಪಾಯಿಗಳ ನೆರವು ನೀಡಬೇಕೆಂಬ ಸರಕಾರವನ್ನು ಆಗ್ರಹಿಸುತ್ತದೆ. ಸಚಿನ ಪಾಂಚಾಳ ಸಾವಿನ ನಂತರವು ಆ ಕುಟುಂಬವನ್ನು ಪಟ್ಟ ಭದ್ರ ಹಿತಾಸಕ್ತಿಗಳು ಬೆದರಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಸಚಿನ್ ಪಾಂಚಾಳ ಸಾವಿನ ನಂತರ ಆ ತಾಯಿಯು ಹಾಸಿಗೆ ಹಿಡಿದಿದ್ದಾಳೆ. ಆ ತಾಯಿಯ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಏನಾದರೂ ಆದರು ಈಗಾಗಲೇ FIR ಪಟ್ಟಿಯಲ್ಲಿ ಇರುವವರ ಹೊಣೆ ಆಗಬೇಕಾಗುತ್ತೇ ಎಂದು ಎಚ್ಚರಿಕೆ ನೀಡಿದರು.

Edited By : Manjunath H D
PublicNext

PublicNext

07/01/2025 10:12 pm

Cinque Terre

45.97 K

Cinque Terre

0

ಸಂಬಂಧಿತ ಸುದ್ದಿ