ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್: ಜನವರಿ 17ರಿಂದ 19ರವರೆಗೆ ರಾಜ್ಯಮಟ್ಟದ ಪಶು ಕುಕ್ಕುಟ, ಮತ್ಸ್ಯ ಮೇಳ

ಬೀದರ್: ನಗರದ ಕಮಠಾಣ ಸಮೀಪದ ನಂದಿನಗರ ಹತ್ತಿರವಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜನವರಿ 17 ರಿಂದ 19ರವರೆಗೆ ವಿವಿಧ ಜಾನುವಾರು, ಕುಕ್ಕುಟ ತಳಿಗಳ ಪ್ರದರ್ಶನ ಮತ್ತು ಮತ್ಸ್ಯ ಮೇಳ ಜರುಗಲಿದೆ ಎಂದು ಕುಲಪತಿ ಡಾ. ಕೆ.ಸಿ.ವೀರಣ್ಣ ತಿಳಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಶೋಧನೆ ಮತ್ತು ತಂತ್ರಜ್ಞಾನದ ಫಲ ರೈತರಿಗೆ ತಲುಪಿಸುವ ಉದ್ದೇಶದಿಂದ ಜನವರಿ 17, 18 ಹಾಗೂ 19ರವರೆಗೆ ಮೂರು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಶು ಹಾಗೂ ಮೀನು ಸಾಕಾಣಿಕೆಯಲ್ಲಿ ಆಸಕ್ತಿಯುಳ್ಳ ರೈತರು ಸೇರಿದಂತೆ ಯುವಜನರಿಗೆ ಇದರಲ್ಲಿ ಮಹತ್ವದಾದ ಮಾಹಿತಿ ಲಭ್ಯವಾಗಲಿದೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕಂಡುಕೊಳ್ಳಲು ಇದು ಸಹಾಯಕವಾಗಲಿದೆ ಎಂದು ತಿಳಿಸಿದರು.

ಪಶುಮೇಳದಲ್ಲಿ ಸುಮಾರು 180ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಮೇಳದಲ್ಲಿ ಇದರಲ್ಲಿ ಕೃಷಿ, ರೇಷ್ಮೆ, ತೋಟಗಾರಿಕೆ ಮತ್ತು ಜಾನುವಾರು ಇಲಾಖೆಗಳು ಭಾಗವಹಿಸುತ್ತಿವೆ. ರಾಜ್ಯದ ರೈತರನ್ನು ಪ್ರೋತ್ಸಾಹಿಸಲು ಪ್ರಗತಿಪರ ರೈತರಿಗೆ ರಾಜ್ಯದ 31 ಜಿಲ್ಲೆಯಿಂದ ಶ್ರೇಷ್ಠ ರೈತ ಮತ್ತು ರೈತ ಮಹಿಳಾ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದರು.

ಮೂರು ದಿನಗಳ ವರೆಗೆ ನಡೆಯಲಿರುವ ಮೇಳದಲ್ಲಿ ಭಾಗವಹಿಸುವವರಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತ ಪ್ರವೇಶ ಇರಲಿದೆ. ರಾಜ್ಯದ ವಿವಿಧ ಕಡೆಗಳಿಂದ ಬಂದು ಹೋಗುವ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅತಿ ಕಡಿಮೆ ಶುಲ್ಕದಲ್ಲಿ ಆಹಾರದ ಮಳಿಗೆಗಳನ್ನು ತೆರೆಯಲಾಗುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುಲಸಚಿವ ಪಿ.ಟಿ.ರಮೇಶ್, ಡೀನ್ ಹಾಗೂ ವಿಜ್ಞಾನಿ ಡಾ.ಶಿವಪ್ರಕಾಶ್, ಸಿಂಡಿಕೇಟ್ ಸದಸ್ಯ ಬಸವರಾಜ ಭತಮುರ್ಗೆ, ಮೇಳದ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಚನ್ನಪ್ಪಗೌಡ ಬಿರಾದಾರ್, ಡಾ.ದಿಲೀಪ್‌ಕುಮಾರ್, ಅಶೋಕ್ ಪವಾರ್, ವೀರ ಜಾಧವ್, ಎಂ.ಕೆ ತಾಂದಳೆ, ಅಹಮ್ಮದ್ ಹಾಗೂ ಶ್ರೀಕಾಂತ್ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

13/01/2025 08:29 pm

Cinque Terre

460

Cinque Terre

0