ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್: ಬೈಕ್‌ನಿಂದ ಬಿದ್ದು ಓರ್ವ ಮೃತ್ಯು - ಸಹ ಸವಾರನಿಗೆ ಗಾಯ

ಬೀದರ್: ಬೈಕ್ ಮೇಲೆ ತೆರಳುವಾಗ ರಸ್ತೆಯ ತಿರುವು ಕಾಣದೆ ಬೈಕ್ ಮೇಲಿಂದ ಬಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇನ್ನೊಬ್ಬ ಗಾಯಗೊಂಡ ಘಟನೆ ಭಾಲ್ಕಿ ತಾಲ್ಲೂಕಿನ ಭಾಟಸಾಂಗವಿ ಗ್ರಾಮದ ಹತ್ತಿರ ನಡೆದಿದೆ.

ಭಾಟಸಾಂಗವಿ ಗ್ರಾಮದ ನಿವಾಸಿ ಓಂಕಾರ್ ಪಾಂಚಾಳ್ (35) ಮೃತಪಟ್ಟ ವ್ಯಕ್ತಿ.

ನಿನ್ನೆ ಶಿವಣಿ ಗ್ರಾಮದಲ್ಲಿ ಪಿಕೆಪಿಎಸ್ ನ ಚುನಾವಣೆವಿದ್ದ ಕಾರಣ ಓಂಕಾರ್ ಮತ್ತು ಗಣೇಶ್ ಭಾಟಸಾಂಗವಿ ಗ್ರಾಮದಿಂದ ಶಿವಣಿ ಗ್ರಾಮಕ್ಕೆ ಹೋಗಿದ್ದರು. ಚುನಾವಣೆ ಮುಗಿಸಿಕೊಂಡು ಹಿಂದಿರುಗುವಾಗ ನಸುಕಿನ ಜಾವ ಸುಮಾರು 4 ಗಂಟೆಯಾಗಿತ್ತು. ಬೈಕ್ ಮೇಲೆ ಬರುವಾಗ ಕತ್ತಲಲ್ಲಿ ರಸ್ತೆಯ ತಿರುವು ಇದ್ದದ್ದು ಗೊತ್ತಾಗದ ಕಾರಣದಿಂದ ಬೈಕ್ ರಸ್ತೆಯ ಪಕ್ಕದ ಹೊಲದಲ್ಲಿ ಹೋಗಿ ಬಿದ್ದಿದೆ. ಪರಿಣಾಮವಾಗಿ ಓಂಕಾರ್ ಪಾಂಚಾಳ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಣೇಶನಿಗೆ ಗಾಯಗಳಾಗಿದ್ದು ಭಾಲ್ಕಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಭಾಲ್ಕಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

14/01/2025 03:46 pm

Cinque Terre

200

Cinque Terre

0