ಬೀದರ್: 2028ಕ್ಕೆ ನಾನೇ ಸಿಎಂ ಎಂಬ ಹೇಳಿಕೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೀದರ್‌ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಯುದ್ಧಕ್ಕೂ ಮೊದಲೇ ಸೈನಿಕರನ್ನು ಸಿದ್ಧತೆ ಮಾಡ್ತಾರೆ. ಹಾಗಾಗಿ 2028ಕ್ಕೆ ನಾನು ಸಿಎಂ ಆಕಾಂಕ್ಷಿ ಇದ್ದೇನೆ ಅಂತ ಹೇಳಿದ್ದೇನೆ. ಒಂದೆರಡು ತಿಂಗಳು ಮೊದಲೇ ತಯಾರಿ ಮಾಡ್ಕೊಬೇಕಲ್ವಾ?' ಎಂದು ಅವರು ಪ್ರಶ್ನಿಸಿದರು.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಚಿನ್ ಅವರು ಪ್ರಿಯಾಂಕ್ ಖರ್ಗೆ ಹೆಸರು ಬಳಸಿಲ್ಲ. ಅವರ ಆಪ್ತ ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆದಿದೆ. ಸತ್ಯಾಸತ್ಯತೆ ಹೊರಬರುತ್ತದೆ. ಯಾರ ಕೈವಾಡ ಇದೆ, ಯಾರು ಭೇಟಿ ಆಗಿದ್ದಾರೆ ಎಲ್ಲವೂ ಹೊರಬರುತ್ತದೆ ಎಂದರು.
PublicNext
07/01/2025 08:54 pm