ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್: ಪಡಿತರ ವಿತರಣೆಗೆ ಹಣ ವಸೂಲಿ - ಶಾಸಕ ಪ್ರಭು ಚವ್ಹಾಣ ಗರಂ

ಬೀದರ್: ಪಡಿತರ ಪಡೆಯಬೇಕೆಂದರೆ ನ್ಯಾಯಬೆಲೆ ಅಂಗಡಿಯಲ್ಲಿ 10 ರೂಪಾಯಿ ಕೊಟ್ಟು ಹೆಬ್ಬೆಟ್ಟಿನ ಗುರುತು ನೀಡಬೇಕು. ಇಲ್ಲವಾದರೆ ಪಡಿತರ ಸಿಗುವುದಿಲ್ಲ. ಒಂದು ಕೆಜಿ ಅಕ್ಕಿ ಕಡಿತಗೊಳಿಸುತ್ತಿದ್ದಾರೆ. ತಿಂಗಳು ಪೂರ್ತಿ ಪಡಿತರ ವಿತರಿಸದೇ 2-3 ದಿನ ಮಾತ್ರ ವಿತರಿಸಲಾಗುತ್ತಿದೆ ಎಂದು ಜಕನಾಳ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಾಗ ಶಾಸಕ ಪ್ರಭು ಬಿ.ಚವ್ಹಾಣ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಗ್ರಾಮ ಸಂಚಾರದ ನಿಮಿತ್ತ ಶಾಸಕರು ಜ.3ರಂದು ಔರಾದ(ಬಿ) ತಾಲ್ಲೂಕಿನ ಜಕನಾಳ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಒಬ್ಬೊಬ್ಬರಾಗಿ ಸಮಸ್ಯೆಗಳನ್ನು ಹೇಳಿದರು. ಪಡಿತರ ಪಡೆಯಲು ಬೇರೆ ಊರಿಗೆ ಹೋಗಬೇಕಾಗುತ್ತದೆ. ಒಂದು ದಿನ ಹೆಬ್ಬೆಟ್ಟಿನ ಗುರುತು ನೀಡಲು ಹೋಗಬೇಕು. ಮತ್ತೊಮ್ಮೆ ಪಡಿತರ ಪಡೆಯಲು ಹೋಗಬೇಕು. ತಿಂಗಳಲ್ಲಿ 2-3 ದಿನ ಮಾತ್ರ ಪಡಿತರ ವಿತರಣೆ ಮಾಡುತ್ತಾರೆ. ನಂತರ ಹೋದರೆ ರೇಷನ್ ಸಿಗದೇ ವಾಪಸ್ಸಾಗಬೇಕಾಗುತ್ತದೆ. ಕೂಲಿ-ನಾಲಿ ಮಾಡಿಕೊಂಡು ಬದುಕುವ ನಾವು ಎಲ್ಲ ಕೆಲಸ ಬಿಟ್ಟು ರೇಷನ್‌ ಗಾಗಿ ಅಲೆದಾಡಬೇಕಾಗುತ್ತಿದೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.

ಇಷ್ಟೊಂದು ಸಮಸ್ಯೆಯಿದ್ದರೂ ನೀವು ಕಣ್ಣು ಮುಚ್ಚಿ ಕುಳಿತಿದ್ದೀರಾ ? ಸಂಬಂಧಪಟ್ಟವರ ವಿರುದ್ಧ ಇನ್ನೂ ಯಾಕೆ ಕ್ರಮ ಜರುಗಿಸಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡರು. ಇದು ಒಂದು ಊರಿನ ಸಮಸ್ಯೆ ಮಾತ್ರವಲ್ಲ. ಎಲ್ಲ ಗ್ರಾಮಗಳಲ್ಲಿ ಇದೇ ರೀತಿಯ ಪರಿಸ್ಥಿತಿಯಿದೆ. ಬಡವರಿಂದ ಹಣ ವಸೂಲಿ ಮಾಡುವುದು ಮಹಾಪಾಪ. ಅಂಥಹವರ ವಿರುದ್ಧ ಕೂಡಲೇ ಕಠಿಣ ಕ್ರಮವಾಗಬೇಕು. ಇಲ್ಲವಾದಲ್ಲಿ ತಮ್ಮ ವಿರುದ್ಧವೇ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

Edited By : Suman K
Kshetra Samachara

Kshetra Samachara

04/01/2025 12:09 pm

Cinque Terre

3.06 K

Cinque Terre

0

ಸಂಬಂಧಿತ ಸುದ್ದಿ