ನವಲಗುಂದ: ತಾಲೂಕಿನ ಯಮನೂರು ಗ್ರಾಮದಲ್ಲಿ ಕುಡಿಯಲು ಕಲುಷಿತ ನೀರು ಪೂರೈಕೆಯಾಗುತ್ತಿರುವ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಲುಷಿತ ನೀರು ಪೂರೈಕೆ ಮಾಡಿ ಜನರ ಜೀವಕ್ಕೆ ಕುತ್ತು ತಂದ ಪಂಚಾಯಿತಿ ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿಯೊಂದನ್ನು ಬಿತ್ತರಿಸಿತ್ತು.
ಸುದ್ದಿ ಪ್ರಸಾರಗೊಂಡ ಹಿನ್ನಲೆ ಎಚ್ಚೆತ್ತ ತಾಲೂಕು ಪಂಚಾಯಿತಿ ಯಮನೂರಿನ ಗ್ರಾಮದ ಕೆರೆಯಲ್ಲಿರುವ ನೀರನ್ನು ಹೊರಗೆ ಹಾಕುವಂತೆ ಆದೇಶ ಮಾಡಿತ್ತು. ಈ ಹಿನ್ನಲೆಯಲ್ಲಿ ಕೆರೆಯ ನೀರನ್ನು ಹೊರ ಹಾಕುವಲ್ಲಿ ಗ್ರಾಮ ಪಂಚಾಯಿತಿ ಮುಂದಾಗಿದೆ.
ಅಲ್ಲದೇ ಸುದ್ದಿ ನೋಡಿದ ಶಾಸಕ ಎನ್.ಎಚ್.ಕೋನರಡ್ಡಿ ಇಂದು ಈ ಕೆರೆಯನ್ನು ವೀಕ್ಷಣೆ ಮಾಡಿ ಕೆರೆಯ ನೀರನ್ನು ಬೇಗನೆ ಹೊರಹಾಕಿ ಹೊಸ ನೀರನ್ನು ತುಂಬಿ ಉರುಸ್ ಪ್ರಾರಂಭ ಆಗುವುದರ ಒಳಗಾಗಿ ಈ ಪ್ರಕ್ರಿಯೆ ಮುಗಿಸಿ ಎಂದು ತಾಕೀತು ಮಾಡಿದರು. ಇದು ನಿಮ್ಮ ಪಬ್ಲಿಕ್ ನೆಕ್ಸ್ಟ್ ನ ಜನಪರ ಕಾಳಜಿಗೆ ಸಾಕ್ಷಿಯಾಗಿದೆ.
-ಶಂಕರ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ.
Kshetra Samachara
07/01/2025 04:40 pm