ಬೆಂಗಳೂರು: ಮತ್ತೊಬ್ಬ ಬಿಜೆಪಿ ನಾಯಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸಕಲೇಶಪುರ ಕ್ಷೇತ್ರದಿಂದ ಕಳೆದ ಬಾರಿ ಶಾಸಕ ಸ್ಥಾನಕ್ಕೆ ಸ್ಫರ್ಧಿಸಿ ಪರಾಜಯಗೊಂಡಿದ್ದ ಸೋಮಶೇಖರ್ @ ಜಿಮ್ ಸೋಮ, @ ನಾರ್ವೆ ಸೋಮನ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
26 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ತ ಮಹಿಳೆ ಸ್ನೇಹಿತೆ ಮೂಲಕ ಸೋಮಶೇಖರ್ ಪರಿಚಯವಾಗಿದ್ದು, ಕಳೆದ ವರ್ಷ ಸಂತ್ರಸ್ತ ಯುವತಿಗೆ ಮದುವೆ ಫಿಕ್ಸ್ ಆಗಿತ್ತು. ಈ ಸಮಯದಲ್ಲಿ ಸಂತ್ರಸ್ತ ಮಹಿಳೆ ಮದುವೆಗಾಗಿ ಸೋಮಶೇಖರ್ ಬಳಿ ಹಣದ ಸಹಾಯ ಕೇಳಿದ್ರಂತೆ. ಸುಮಾರು 6 ಲಕ್ಷ ಹಣವನ್ನ ಸಹಾಯವಾಗಿ ಕೇಳಿದ್ದಕ್ಕೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಣ ಕೊಡುವುದಾಗಿ ಸಂತ್ರಸ್ತೆ ಪಿಜಿ ಬಳಿ ಹೋಗಿ ಸೋಮಶೇಖರ್ ಮಹಿಳೆಯನ್ನ ಕರೆತಂದಿದ್ರಂತೆ. ಸಂತ್ರಸ್ತೆಯನ್ನ ಲ್ಯಾಂಗ್ ಫೋರ್ಡ್ ರಸ್ತೆಯ ಪ್ಲಾಟ್ ಗೆ ಕರೆದೋಯ್ದು ಸಂತ್ರಸ್ತೆಯ ಇಚ್ಚೆಗೆ ವಿರುದ್ಧವಾಗಿ ಮದ್ಯಕುಡಿಸಿ ಅತ್ಯಾಚಾರ ನಡೆಸಿದ್ನಂತೆ.
ಈ ವಿಚಾರ ಹೊರಗಡೆ ಹೇಳಿದ್ರೆ ಪ್ರಾಣ ತೆಗಯೋದಾಗಿ ಬೆದರಿಸಿದ್ನಂತೆ. ಸಾಲದಕ್ಕೆ ಮಾನ ಹರಾಜಾಕೋದಾಗಿ ಬೆದಿರಿಕೆ ಹಾಕಿದ್ದಾಗಿ ದೂರು ದಾಖಲಾಗಿದೆ.
ಆದ್ರೆ ಘಟನೆ ನಡೆದು ಮೂರು ತಿಂಗಳ ನಂತರ ಸಂತ್ರಸ್ತೆ ಅಶೋಕನಗರ ಠಾಣೆಗೆ ದೂರು ನೀಡಿರೋದು ಕೆಲ ಅನುಮಾನಕ್ಕೂ ಎಡೆಮಾಡಿಕೊಟ್ಟಿದೆ. ಇನ್ನೂ ಪ್ರಕರಣ ದಾಖಲಾಗ್ತಿದ್ದಂತೆ ಸೋಮಶೇಖರ್ ತಲೆಮರೆಸಿಕೊಂಡಿದ್ದು ಆರೋಪಿ ಪತ್ತೆಗಾಗಿ ಪೊಲೀಸ್ರು ಹುಡುಕಾಟ ನಡೆಸಿದ್ದಾರೆ.
PublicNext
06/01/2025 10:48 pm