ಬೆಂಗಳೂರು: ಸಾಲದ ಹೊರೆ ಬರಿ ರೈತ, ಬಡವನಿಗೆ ಮಾತ್ರ ಅಲ್ಲ ಬ್ಯುಸಿನೆಸ್ ಮೆನ್‌ಗಳಿಗೂ ಜೀವನವೇ ಬೇಡ ಅನ್ನೋವಷ್ಟು ಕುಗ್ಗಿಸುತ್ತೆ. ಅದೇ ರೀತಿ ಹುಳಿಮಾವು ಲಿಮಿಟ್ಸ್ ನಲ್ಲಿ ನಿನ್ನೆ ಉದ್ಯಮಿಯೊಬ್ಬರು ಸಾಲದಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟು ಸೀದಾ ನೇಣಿಗೆ ಶರಣಾಗಿದ್ದಾನೆ.
ಆರ್ಥಿಕತೆ ಅನ್ನೋದು ಎಲ್ರ ಲೈಫಲ್ಲೂ ಮೋಸ್ಟ್ ಇಂಪಾರ್ಟೆಂಟ್ ಥಿಂಗ್. ಇರೋ ಕಷ್ಟದ ಪರಿಸ್ಥಿತಿಯಿಂದ ಹೊರಗ್ ಬರ್ಬೇಕು ಅಂತ ಕಷ್ಟಪಟ್ಟು ದುಡಿಯೋದು. ಸಾಲಗೀಲ ಮಾಡಿ ಸಣ್ಣದೇ ಆಗಲಿ. ದೊಡ್ಡದೇ ಆಗಲಿ ಬ್ಯುಸಿನೆಸ್ ಮಾಡೋದು. ಆರ್ಥಿಕತೆಯಲ್ಲಿ ಉನ್ನತಿ ಪಡೀಬೇಕು ಅಂತಾ ಹಲವರು ರಿಸ್ಕ್ ತಗೊಳ್ತಾರೆ. ಕೆಲವರು ಸಕ್ಸಸ್ ಆದ್ರೆ ಇನ್ನು ಕೆಲವರು ಫ್ಯೇಲ್ಯೂರ್ ಆಗ್ತಾರೆ. ಲಾಸ್ ಆದವರ ಕಥೆಯೇ ಬೇರೆ. ಹೀಗೆ ಕ್ಯಾಟರಿಂಗ್ ಬ್ಯುಸಿನೆಸ್‌ನಲ್ಲಿ ಲಾಸ್ ಆಗಿ ಸಾಲಗಾರರಿಂದ ಬೇಸತ್ತು ಉದ್ಯಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಷಯ ನಗರದಲ್ಲಿ ನಡೆದಿದೆ.
ಅಂದ್ಹಾಗೆ 40ವರ್ಷದ ಆಸು ಪಾಸಿನ ಕಲಾಲ್ ದತ್ತ ಆತ್ಮಹತ್ಯೆ ಮಾಡಿಕೊಂಡಿರೋ ಉದ್ಯಮಿ. ಸುಮಾರು ನಲವತ್ತಕ್ಕೂ ಹೆಚ್ಚು ಆಸ್ಪತ್ರೆಗೆ ಕ್ಯಾಟರಿಂಗ್ ಒದಗಿಸುವ ಬ್ಯುಸಿನೆಸ್ ಮಾಡಿಕೊಂಡಿದ್ದ ಕಲಾಲ್ ದತ್ತ ಸುಮಾರು ಐವತ್ತು ಲಕ್ಷ ಸಾಲ ಮಾಡಿಕೊಂಡಿದ್ರಂತೆ. ಹಲವಾರು ವರ್ಷಗಳಿಂದ ಬ್ಯುಸಿನೆಸ್ ನಡೆಸ್ತಿದ್ದ ಕಲಾಲ್ ದತ್ತ, ಕಳೆದ ನಾಲ್ಕು ವರ್ಷಗಳಿಂದ ಬ್ಯುಸಿನೆಸ್‌ನಲ್ಲಿ ಲಾಸ್ ಕಾಣ್ತಿದ್ರಂತೆ. ಒಂದ್ಕಡೆ ಬ್ಯುಸಿನೆಸ್ ನಲ್ಲಿ ಪ್ರಾಫಿಟ್ ಇಲ್ಲ. ಮತ್ತೊಂದ್ ಕಡೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಮತ್ತೊಂದ್ ಕಡೆ ಮಾನಸಿಕ ನೋವು. ಇದೆಲ್ಲದರಿಂದ ಖಿನ್ನತೆಗೆ ಒಳಗಾಗಿದ್ದ ಕಲಾಲ್ ದತ್ತ ಪ್ರತಿ ದಿನವೂ ಪತ್ನಿ ಬಳಿ ತನ್ನ ನೋವು ಹೇಳ್ಕೊಳ್ತಿದ್ರಂತೆ.
ನಿನ್ನೆ ಸಂಜೆ ಅಕ್ಷಯನಗರದ ಲಾಡ್ಜ್ ವೊಂದರಲ್ಲಿ ರೂಂ ಮಾಡಿಕೊಂಡಿದ್ದ ಕಲಾಲ್ ದತ್ತ ಇದ್ದಕ್ಕಿದ್ದಂತೆಯೇ ನೇಣಿಗೆ ಶರಣಾಗಿ ಶವವಾಗಿ ಪತ್ತೆಯಾಗಿದ್ದಾನೆ. ಇದು ಮೇಲುನೋಟಕ್ಕೆ ಸೂಸೈಡ್ ಕೇಸ್ ಅನ್ನಿಸಿದ್ರೂ ಅವ್ರ ಪತ್ನಿ ಹೇಳೋದೇ ಬೇರೆ.
ಇನ್ನು ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರೋ ಹುಳಿಮಾವು ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಅವ್ರ ಪತ್ನಿ ಏನೋ ಬ್ಯುಸಿನೆಸ್ ಪಾರ್ಟ್‌ನರ್ ಮರಿಸ್ವಾಮಿ ಎಂಬಾತನ ಕಾಟದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾನೆ ಅನ್ನೋ ಆರೋಪ ಮಾಡ್ತಿದ್ದಾರೆ.. ಮತ್ತೊಂದ್ ಕಡೆ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಕಲಾಲ್ ದತ್ತ ಮರಣೋತ್ತರ ಪರೀಕ್ಷೆ ನಡೀತಿದೆ.
ಸದ್ಯ ಎಲ್ಲವೂ ತನಿಖಾ ಹಂತದಲ್ಲಿದ್ದೂ ತನಿಖೆ ನಂತರವೇ ಸಾವಿನ ಸತ್ಯಾಸತ್ಯತೆ ಹೊರಬರಬೇಕಿದೆ.
PublicNext
07/01/2025 07:32 pm