ಬೆಂಗಳೂರು: ಬಿಜೆಪಿಯಿಂದ ಈಗಾಗಲೇ ಹೊರಬಂದಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪಕ್ಷೇತರರಾಗಿ ಶಿವಮೊಗ್ಗ ಲೋಕಸಭೆ ಸ್ಪರ್ಧಿಸಿ ಸೋತದಿದ್ದರು. ಇದೀಗ ಅವರು ಕ್ರಾಂತಿಕಾರಿ ಬ್ರಿಗೇಡ್ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತಂತೆ ಸ್ವಾಮೀಜಿಗಳೊಂದಿಗೆ ಸುದ್ದಿಗೊಷ್ಠಿ ನಡೆಸಿದ ಈಶ್ವರಪ್ಪ ಅವರು, ಮುಂದಿನ ತಿಂಗಳು ಫೆಬ್ರವರಿ 4ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿ ವೀರ ಬ್ರಿಗೇಡ್ ಉದ್ಘಾಟನೆ ನಡೆಸುವ ಬಗ್ಗೆ ಮಾಹಿತಿ ನೀಡಿದರು. ಇದು ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮ. ಹಿಂದೂ ಧರ್ಮ ರಕ್ಷಣೆ ಮಾಡಲು ಹಿಂದೂಗಳು ಒಂದಾಗಬೇಕು. ಹಿಂದೂಗಳು ಒಂದಾಗದಿದ್ದರೆ ಬಹಳ ಕಷ್ಟ, 1008 ಮಠಾಧೀಶರ ಪಾದಪೂಜೆಯೊಂದಿಗೆ ಉದ್ಘಾಟನೆ ಆಗಲಿದೆ. ಹಿಂದೂ ಧರ್ಮದ ಒಳಿತಿಗಾಗಿ ಕ್ರಾಂತಿ ವೀರ ಬ್ರಿಗೇಡ್ ಕೆಲಸ ಮಾಡಲಿದೆ ಎಂದು ಮಾಹಿತಿ ನೀಡಿದರು.
ಹಿಂದೂಳಿದವರು ಮತ್ತು ದಲಿತರಿಗೆ ಬೆಂಬಲ ಸಮಾಜದಿಂದಲೂ, ಸರ್ಕಾರದಿಂದಲೂ ಸಿಗುತ್ತಿಲ್ಲ, ಯಾರಿಗೆ ಅನ್ಯಾಯ ಆಗಿದೆಯೋ ಅಲ್ಲಿ ಕ್ರಾಂತಿ ವೀರ ಬ್ರಿಗೇಡ್ ನಿಲ್ಲಲಿದೆ,ಸ್ವಾಮೀಜಿಗಳು ತೀರ್ಮಾನ ತೆಗೆದುಕೊಂಡಾಗ ನಾವು ಪೂರ್ಣ ಬೆಂಬಲ ನೀಡಿದ್ದೇವೆ. ಸಕಲ ಹಿಂದೂ ಸಮಾಜದ ರಕ್ಷಣೆಗೆ ಈ ಬ್ರಿಗೇಡ್ ಕೆಲಸ ಮಾಡಲಿದೆ.ರಾಯಣ್ಣ ಬ್ರಿಗೇಡ್ ಅನ್ನು ಅಮಿತ್ ಷಾ ಮಾತು ಕೇಳಿ ನಿಲ್ಲಿಸಿದ್ದೆ, ಈಗ ಸಾಧು ಸಂತರ ಜತೆ ಸೇರಿಕೊಂಡು ಕ್ರಾಂತಿ ವೀರ ಬ್ರಿಗೇಡ್ ಶುರು ಮಾಡಿದ್ವಿ. ಈ ಬಾರಿ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ ಯಾರು ಬೆಂಬಲಿಸಿದರೂ ಸ್ವಾಗತ ಮಾಡ್ತೇವೆ. ಹಿಂದೂ ಸಮಾಜದಲ್ಲಿರುವ ಸಕಲ ಸಮಾಜದವರಿಗೆ ಈ ಬ್ರಿಗೇಡ್ ಬೆಂಬಲ ಕೊಡುತ್ತದೆ. ಹಿಂದೆ ರಾಯಣ್ಣ ಬ್ರಿಗೇಡ್ ಕಟ್ಟಿದ್ದಾಗ ಯಾವುದೇ ಸ್ವಾಮೀಜಿಗಳು ನೇತೃತ್ವ ತೆಗೆದುಕೊಂಡಿರಲಿಲ್ಲ, ಹಿಂದೆ ದೊಡ್ಡವರ ಮಾತು ಕೇಳುವ ಅಭ್ಯಾಸ ನನಗೆ ಅವತ್ತು ಇತ್ತು, ಇವತ್ತು ಇಲ್ಲ ಅಂದು ದೊಡ್ಡವರ ಮಾತು ಕೇಳಿ ಅಂದು ನಿಲ್ಲಿಸಿದೆ ಇಂದು ಯಾವುದೇ ಕಾರಣಕ್ಕೂ ಈ ಬ್ರಿಗೇಡ್ ನಿಲ್ಲುವುದಿಲ್ಲ ಇದು ಯಾವುದೇ ಪಕ್ಷದ ಬ್ರಿಗೇಡ್ ಆಗಿಲ್ಲ, ಬಿಜೆಪಿಯಲ್ಲಿನ ಅಸಮಾಧಾನಿತರು, ಸಮಾಧಾನಿತರು ನಮ್ಮ ಜೊತೆ ಅಂತಾ ಇಲ್ಲಿ ಪ್ರಶ್ನೆ ಇಲ್ಲ. ಫೆಬ್ರವರಿ 4ರಂದು ಎಲ್ಲವೂ ವೇದಿಕೆ ಮೇಲೆ ಗೊತ್ತಾಗುತ್ತದೆ ಎಂದು ತಿಳಿಸಿದರು.
PublicNext
07/01/2025 08:08 pm