ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆರ್.ಆರ್.ನಗರ ವಂಚನೆ ಪ್ರಕರಣದಲ್ಲಿಯೂ ಐಶ್ವರ್ಯಗೌಡ ದಂಪತಿಗೆ ಜಾಮೀನು

ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಸೋಗಿನಲ್ಲಿ ಮಹಿಳೆಗೆ 3.25 ಕೋಟಿ ರೂ.ನಗದು ವಂಚನೆ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಐಶ್ವರ್ಯಗೌಡ ದಂಪತಿ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಜಾಮೀನು ಆದೇಶ ದೊರೆಯುತ್ತಿದ್ದಂತೆ ಐಶ್ವರ್ಯಗೌಡ ದಂಪತಿ ಪರ ವಕೀಲರು ಕೋರಮಂಗಲದ ಎನ್ ಜಿವಿ ಬಡಾವಣೆಯಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮನೆಗೆ ತೆರಳಿ ಜಾಮೀನು ಪ್ರತಿ ಆದೇಶ ತೋರಿಸಿದ ನಂತರವಷ್ಟೇ ಆರೋಪಿಗಳು ಬಿಡುಗಡೆಯಾಗಲಿದ್ದಾರೆ.

ವಿಚಾರಣೆಗೆ ಬರುವಂತೆ ಆರೋಪಿಗಳಿಗೆ ಲಿಖಿತ ರೂಪದಲ್ಲಿ ನೋಟಿಸ್ ಜಾರಿ ಮಾಡಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಬಂಧನ ಪ್ರಕ್ರಿಯೆಯನ್ನ ಕ್ರಮಬದ್ಧವಾಗಿ ಮಾಡಿಲ್ಲ. ಹೀಗಾಗಿ ತಮ್ಮ ಕಕ್ಷಿದಾರರಿಗೆ ಜಾಮೀನು ಕೋರಿ ಮಂಜೂರು ಮಾಡುವಂತೆ ಆರೋಪಿಗಳ ಪರ ವಕೀಲ ಸುನೀಲ್ ರೆಡ್ಡಿ ಮನವಿ ಮಾಡಿದ್ದರು. ಮನವಿ ಆಲಿಸಿ ಅರ್ಜಿ ಪುರಸ್ಕರಿಸಿದ ಹೈಕೋರ್ಟ್, ಆರೋಪಿಗಳಿಗೆ ವಿಚಾರಣೆ ನೋಟಿಸ್ ನೀಡದಿರುವುದನ್ನ ಆಕ್ಷೇಪಿಸಿ ಆರೋಪಿತರಿಗೆ ಜಾಮೀನು ಮಾನ್ಯ ಮಾಡಿತು.

ವಾರಾಹಿ ಜ್ಯೂವೆಲ್ಲರಿ ಮಾಲೀಕಿಗೆ ಚಿನ್ನಾಭರಣ ವಂಚನೆ ಪ್ರಕರಣದಲ್ಲಿಯೂ ಐಶ್ವರ್ಯಗೌಡ ದಂಪತಿಗಳಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಬಂಧನಕ್ಕೆ ಕಾರಣಗಳನ್ನ ಲಿಖಿತ ರೂಪದಲ್ಲಿ ಪೊಲೀಸರು ನೀಡಿಲ್ಲ ಎಂಬ ಅಂಶದ ಮೇಲೆ ಜಾಮೀನು ಅರ್ಜಿಯನ್ನ ನ್ಯಾಯಾಲಯ ಎತ್ತಿಹಿಡಿದಿತ್ತು.

ಉನ್ನತ ಮಟ್ಟದ ತನಿಖೆಯಾಗಲಿ

ಆರೋಪಿಗಳಿಗೆ ಜಾಮೀನು ದೊರೆಯುತ್ತಿದ್ದಂತೆ ಪ್ರಕರಣ ದೂರುದಾರರಾಗಿರುವ ಶಿಲ್ಪಾಗೌಡ ಪ್ರತಿಕ್ರಿಯಿಸಿದ್ದು ಐಶ್ವರ್ಯಗೌಡ ವಿರುದ್ಧ ವಂಚನೆ ಪ್ರಕರಣ ಉನ್ನತ ಮಟ್ಟದ ತನಿಖೆಯಾಗಬೇಕು‌. ನನ್ನಗೊಬ್ಬಳಿಗೆ ಮಾತ್ರವಲ್ಲದೆ ಹಲವರಿಗೆ ವಂಚಿಸಿದ್ದಾಳೆ‌. ಪ್ರಕರಣದಲ್ಲಿ ನನಗೆ ಪೊಲೀಸರು ನ್ಯಾಯ ಒದಗಿಸಿಬೇಕೆಂದು ಒತ್ತಾಯಿಸಿದ್ದಾರೆ.

Edited By : Abhishek Kamoji
PublicNext

PublicNext

06/01/2025 10:40 pm

Cinque Terre

17.18 K

Cinque Terre

0

ಸಂಬಂಧಿತ ಸುದ್ದಿ