ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗಾಗಿ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಲಾಗಿದ್ದು, ಮಾದಿಗ ಸಮುದಾಯ ಮುಖಂಡರು ಸಭೆಯನ್ನ ನಡೆಸಿದ್ದು, ಆಯೋಗದ ಮುಂದೆ ಮಂಡಿಸಬಹುದಾದ ವಿಷಯಗಳ ಬಗ್ಗೆ ಚರ್ಚೆಯನ್ನ ನಡೆಸಿದರು.
ಒಳ ಮೀಸಲಾತಿ ಜಾರಿ ಕುರಿತು ದೊಡ್ಡಬಳ್ಳಾಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮಾದಿಗ ಸಮುದಾಯದ ಮುಖಂಡರು ಹಾಗೂ ಹೈಕೋರ್ಟ್ ವಕೀಲರಾದ ದೊಡ್ಡೇರಿ ವೆಂಕಟೇಶ್ , ಕಾಂಗ್ರೆಸ್ ಅಧಿಕಾರದಲ್ಲಿರುವ ತೆಲಂಗಾಣ ಮತ್ತು ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿ ಮಾಡಲು ನಿಧಾನ ಮಾಡುತ್ತಿದ್ದಾರೆ. ನಿಧಾನವಾದರೂ ಸಹ ರಾಜ್ಯ ಸರ್ಕಾರ ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಒಳ ಮೀಸಲಾತಿ ಜಾರಿಗಾಗಿ ಆಯೋಗವನ್ನ ರಚನೆ ಮಾಡಿದೆ. ಎರಡು ತಿಂಗಳ ನಂತರ ಆಯೋಗ ಕೆಲಸ ಪ್ರಾರಂಭ ಮಾಡಿದೆ.
ಅದಕ್ಕೆ ಪೂರಕವಾಗಿ ಸಚಿವರಾದ ಕೆ.ಹೆಚ್.ಮುನಿಯಪ್ಪ, ತಿರ್ಮಾಪುರ್ ಸೇರಿದಂತೆ ಮುಖಂಡರು ಮತ್ತು ಅಧಿಕಾರಿಗಳು ಪೂರ್ವಭಾವಿ ಸಭೆಯನ್ನ ನಡೆಸಿದ್ದು, ನೂರೊಂದು ಜಾತಿಗಳು ಸಮಪಾಲು, ಸಮಬಾಳು ಸಿಗಬೇಕೆ, ಅವರ ಪಾಲು ಅವರಿಗೆ ಸಿಕ್ಕಾಗ ಮಾತ್ರ ಅಭಿವೃದ್ಧಿ ಸಾಧ್ಯ, ಒಳ ಮೀಸಲಾತಿ ಜಾರಿ ಪರವಾಗಿ ಬಿಜೆಪಿ ಪಕ್ಷ ಇದೆ ಎಂದು ಹೇಳಿದರು.
ಸದಾಶಿವ ಆಯೋಗ, ಮಾಧುಸ್ವಾಮಿ ವರದಿ, ಅಂದಿನ ಚೀಫ್ ಸೆಕ್ರೆಟರ್ ರತ್ನಪ್ರಭಾರವರ ವರದಿ, ಕಾಂತರಾಜು ಆಯೋಗದ ವರದಿಗಳಲ್ಲಿ ದತ್ತಾಂಶಗಳಿದ್ದು, ಈಗಾಗಲೇ ಇರುವ ದತ್ತಾಂಶಗಳನ್ನ ತೆಗೆದು ಕೊಂಡು ಎಲ್ಲರ ಪರವಾಗಿ ವರದಿಯನ್ನ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗ ವರದಿ ನೀಡುತ್ತದೆ ಎಂಬ ಭರವಸೆ ಇದೆ ಇಂದು ಹೇಳಿದರು.
PublicNext
07/01/2025 01:16 pm