ಬೆಂಗಳೂರು: ಮರ ಕಡಿಯುವಾಗ ಆಯತಪ್ಪಿ ಮೇಲಿಂದ ಬಿದ್ದು ಪಾಲಿಕೆ ಗುತ್ತಿಗೆ ಸಿಬ್ಬಂದಿಯೋರ್ವ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದೆ.
45 ವರ್ಷ ವಯಸ್ಸಿನ ರಾಜಪ್ಪ ಮೃತ ದುರ್ದೈವಿ. ರಾಜಪ್ಪ ಗುತ್ತಿಗೆ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಒಣಗಿದ ಮರವನ್ನು ಇಂದು ಮಧ್ಯಾಹ್ನ ಕಟಾವು ಮಾಡುವಾಗ ಆಯತಪ್ಪಿ ಬಿದ್ದು ರಾಜಪ್ಪ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ ರಾಜಪ್ಪ ಅವರ ಶವ ರವಾನೆಯಾಗಿದ್ದು, ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
PublicNext
07/01/2025 07:15 pm