ಬೆಂಗಳೂರು:ಟ್ಯೂಷನ್ ಗೆ ಬರುತ್ತಿದ್ದ ಬಾಲಕಿಯನ್ನ ಪುಸಲಾಯಿಸಿ ಆಕೆಯನ್ನ ಕರೆದೊಯ್ದಿದ್ದ ಆರೋಪ ಸಂಬಂಧ ಜೆ.ಪಿ.ನಗರ ಪೊಲೀಸರು ನೀಡಿದ್ದ ಲುಕ್ ಔಟ್ ನೋಟಿಸ್ ನಿಂದಾಗಿ ಒಂದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಟ್ಯೂಷನ್ ಟೀಚರ್ ನನ್ನ ಪತ್ತೆ ಹಚ್ಚಿ ಹೆಡೆಮುರಿಕಟ್ಟಿದ್ದಾರೆ.
ಮಗಳನ್ನ ಟ್ಯೂಷನ್ ಟೀಚರ್ ಕರೆದೊಯ್ದಿರುವುದಾಗಿ ಆರೋಪಿಸಿ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಟ್ಯೂಷನ್ ಟೀಚರ್ ಅಭಿಷೇಕ್ ಗೌಡ (25) ಎಂಬಾತನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪ್ರಾಪ್ತೆಯನ್ನ ಸರ್ಕಾರಿ ಬಾಲಮಂದಿರದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನಕಪುರದ ದೊಡ್ಡಸಾತೇನಹಳ್ಳಿ ಮೂಲದ ಅಭಿಷೇಕ್ ಗೆ ನಾಲ್ಕು ವರ್ಷದ ಹಿಂದೆ ಯುವತಿಯೊಂದಿಗೆ ಮದುವೆಯಾಗಿದ್ದ. ಈ ದಂಪತಿಗೆ ಒಂದು ಮಗುವಿದೆ. ವೈಯಕ್ತಿಕ ಕಾರಣಗಳಿಂದ ಪತ್ನಿಯಿಂದ ಅಭಿಷೇಕ್ ದೂರವಾಗಿದ್ದ. ನ್ಯೂಟ್ರಿಷಿಯನ್ ಕೆಲಸ ಆಗಿ ಮಾಡುತ್ತಿದ್ದ. ಡಿಪ್ಲೋಮ ವ್ಯಾಸಂಗ ಮಾಡಿದ್ದ ಆರೋಪಿಯು ಜೆ.ಪಿ.ನಗರದ ಸಾರಕ್ಕಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ.
ಹಲವು ವರ್ಷಗಳಿಂದ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮನೆಯಲ್ಲಿ ಟ್ಯೂಷನ್ ತೆಗೆದುಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿಯು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಕಳೆದ ಆರು ವರ್ಷಗಳಿಂದ ಟ್ಯೂಷನ್ ಗೆ ಬರುತ್ತಿದ್ದಳು.
ಕಳೆದ ನವೆಂಬರ್ 23ರಂದು ಎಂದಿನಂತೆ ಟ್ಯೂಷನ್ ಗೆ ಹೋಗಿದ್ದ ಬಾಲಕಿ ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಮಗಳು ಬರದಿರುವುದನ್ನ ಆತಂಕಗೊಂಡ ಪೋಷಕರು ಆರೋಪಿ ಮನೆಗೆ ಹೋದಾಗ ಬೀಗ ಹಾಕಿರುವುದನ್ನ ಕಂಡಿದ್ದರು. ಟ್ಯೂಷನ್ ಟೀಚರ್ ಪುಸಲಾಯಿಸಿ ತಮ್ಮ ಮಗಳನ್ನ ಕರೆದೊಯ್ದಿರುವುದಾಗಿ ಆರೋಪಿಸಿ ಪೊಲೀಸರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಒಂದೂವರೆ ತಿಂಗಳ ಬಳಿಕ ಆರೋಪಿಯನ್ನ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯನ್ನ ಮದುವೆಯಾಗಿದ್ದ ಟೀಚರ್ ಪ್ರಕರಣ ತನಿಖೆ ಕೈಗೆತ್ತಿಕೊಂಡ ಪೊಲೀಸರು ಅರೋಪಿತ ಮನೆಯನ್ನ ಜಾಲಾಡಿದಾಗ ಉದ್ದೇಶಪೂರ್ವಕವಾಗಿ ಮೊಬೈಲ್ ಬಿಟ್ಟುಹೋಗಿರುವುದನ್ನ ಕಂಡು ಕೊಂಡಿದ್ದರು.
ಒಂದು ವರ್ಷದಿಂದ ಬಾಲಕಿಯನ್ನ ಪ್ರೀತಿ ಮಾಡುತ್ತಿರುವುದಾಗಿ ಹಾಗೂ ಮದುವೆಯಾಗಿರುವ ಬಗೆಗಿನ ವಿಡಿಯೋ ಮೊಬೈಲ್ ನಲ್ಲಿಇರುವುದನ್ನ ಗಮನಿಸಿದ್ದರು. ಆರೋಪಿತ ಹಾಗೂ ಬಾಲಕಿ ಬಳಿ ಮೊಬೈಲ್ ಇರದ ಕಾರಣ ಆರಂಭದಲ್ಲಿ ಪೊಲೀಸರಿಗೆ ಪತ್ತೆಹಚ್ಚಲು ಕಷ್ಟಕರವಾಗಿತ್ತು. ದಾರಿಯಲ್ಲಿ ಆರೋಪಿಯು ಆಕೆಯನ್ನ ಕರೆದುಕೊಂಡು ಹೋಗಿರುವ ಬಗ್ಗೆ ಸಿಸಿಟಿವಿ ಕ್ಯಾಮೆರಾ ಮೂಲಕ ಖಚಿತಪಡಿಸಿದ್ದರು. ಮತ್ತೊಂದೆಡೆ ಆರೋಪಿ ಪೊಲೀಸರಿಗೆ ತಾವಿರುವ ಬಗ್ಗೆ ಗೊತ್ತಾಗದಿರಲು ಮೊಬೈಲ್ ಮನೆಯಲ್ಲಿ ಬಿಟ್ಟುಹೋಗಿದ್ದ. ಅಲ್ಲದೆ ಹೋಗುವಾಗ 70 ಸಾವಿರ ರೂಪಾಯಿ ತೆಗೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಲುಕ್ ಔಟ್ ನೋಟಿಸ್ ನಿಂದ ಸಿಕ್ಕಿಬಿದ್ದ ಯಾರಿಗೂ ತಿಳಿಯದಿರಲು ಆರೋಪಿಯು ಮಂಡ್ಯದ ಮಳವಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ಬಾಲಕಿಯನ್ನ ಇರಿಸಿದ್ದ. ತಾವಿರುವ ಸ್ಥಳದ ಬಗ್ಗೆ ಗೊತ್ತಾಗದಿರಲು ಆನ್ ಲೈನ್ ಸೇರಿ ಇತರ ಹಣದ ವಹಿವಾಟು ಮಾಡದೆ ಚಾಣಕ್ಯ ಮರೆದಿದ್ದ. ಈತನ ಪತ್ತೆಗೆ ವಿವಿಧ ಆಯಾಮಗಳಿಂದ ತನಿಖೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ.
ಆರೋಪಿ ಪತ್ತೆಗಾಗಿ ಎಲ್ಲಾ ಪೊಲೀಸ್ ಠಾಣೆಗಳಿಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಆರೋಪಿ ಇರುವಿಕೆ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ನಗದು ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಮಳವಳ್ಳಿ ಬಳಿ ಸಾರ್ವಜನಿಕರೊಬ್ಬರು ಪ್ರಕಟಣೆಯನ್ನ ಕಂಡ ಕೂಡಲೇ ಅಭಿಷೇಕ್ ಬಗ್ಗೆ ಮನೆ ಮಾಲೀಕರ ಗಮನಕ್ಕೆ ತಂದಿದ್ದರು.
ಈ ವಿಷಯಯನ್ನ ಜೆ.ಪಿ.ನಗರ ಪೊಲೀಸರಿಗೆ ತಿಳಿಸಿದ್ದರು. ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ತೆರಳಿ ಆತನನ್ನ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಘೋಷಿಸಲಾಗಿದ್ದ 25 ಸಾವಿರ ರೂ. ನಗದು ಬಹುಮಾನ ಸ್ವೀಕರಿಸಲು ಮಾಹಿತಿದಾರರು ತಿರಸ್ಕರಿಸಿರುವುದಾಗಿ ಅಧಿಕಾರಿಗಳು ತೆಗೆದುಕೊಂಡಿದ್ದಾರೆ.
Kshetra Samachara
08/01/2025 05:03 pm