ಬೆಂಗಳೂರು : ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರತಂಡದ ವಿರುದ್ಧ ಬಿಎಂಟಿಸಿ ಬನಶಂಕರಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದೆ. ಸಿನಿಮಾ ಶೂಟಿಂಗ್ ಎಂದು ಬಿಎಂಟಿಸಿ ಬಸ್ ಬಾಡಿಗೆ ಪಡೆದು ಬಿಎಂಟಿಸಿ ಸಂಸ್ಥೆಯ ವಿರುದ್ಧವೇ ಚಿತ್ರತಂಡ ವಿಡಿಯೋ ಚಿತ್ರಣ ಮಾಡಿರುವ ಹಾಗೂ ಬಿಎಂಟಿಸಿ ಬಸ್ ಇಂದ ಎಕ್ಸಿಡೆಂಟ್ ಆಗ್ತಿದೆ ಎಂದು ಅಪಪ್ರಚಾರ ಮಾಡಿರುವ ಆರೋಪದ ಮೇಲೆ ದೂರು ದಾಖಲಾಗಿದೆ.
ಎಸ್, ಬಿಎಂಟಿಸಿ ಬಸ್ ಹಿಂಭಾಗದಲ್ಲಿ ತಮ್ಮ ಸಿನಿಮದ ಪೋಸ್ಟರ್ ಅಂಟಿಸಿ, ಆ ಪೋಸ್ಟರ್ ಮೂಲಕ ಸಿನಿಮಾದ ಪ್ರಚಾರ ಮಾಡಲು ಹೊರಟಿದ್ರು, ಆ ಪೋಸ್ಟರ್ ನೋಡಿಕೊಂಡು ಬಂದು ವಾಹನಸವರರು ಡಿಕ್ಕಿ ಹೊಡೆಯುತ್ತಿದ್ದಾರೆ ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿತ್ತು ಇದರಿಂದ ಬಿಎಂಟಿಸಿ ಬಸ್‌ಗೆ ಅಪಪ್ರಚಾರವಾಗಿದೆಯಂತೆ.
ಪೋಸ್ಟರ್ ನೋಡಿಕೊಂಡು ಬಂದು ಪ್ರತಿದಿನ ವಾಹನಸಗಳಲ್ಲಿ ಡಿಕ್ಕಿ ಹೊಡೆಯುತ್ತಿದ್ದಾರೆ ಇಂದು ಜನರಿಗೆ ತಪ್ಪು ಮಾಹಿತಿ ನೀಡಿರುವ ಆರೋಪ ಎದುರಿಸಿರುವ ಸಿನಿಮಾ ತಂಡ, ಬಸ್ ಹಿಂಭಾಗದಲ್ಲಿ ಕಾರು ಚಾಲಕ ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದ ರೀತಿಯಲ್ಲಿ ನಂತರ ಬಿಎಂಟಿಸಿ ಡ್ರೈವರ್ ಗೆ ಕಾರು ಚಾಲಕ ಕೋಟ್ಲುಪಟ್ಟಿ ಹಿಡಿದು ಎಳೆದಾಡುತ್ತಿರುವ ರೀತಿಯಲ್ಲಿ ವಿಡಿಯೋ ಮಾಡಲಾಗಿದೆ.
ಬಿಎಂಟಿಸಿ ಬೆಂಗಳೂರು ನಾಗರಿಕರಿಗೆ ಉತ್ತಮ ಸೇವೆ ನೀಡುತ್ತಿದ್ದು ಜಾಹೀರಾತುಗಳಿಂದ ಯಾವುದೇ ಆಕ್ಸಿಡೆಂಟ್ ಆಗಿರುವ ಪ್ರಕರಣಗಳು ದಾಖಲಾಗಿಲ್ಲ. ಹೀಗಿರುವಾಗ ಈ ಚಿತ್ರವೂ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ ಈ ವಿಡಿಯೋದಿಂದ ಸಾರ್ವಜನಿಕರಲ್ಲಿ ಬಿಎಂಟಿಸಿ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದೆ ಎಂಬ ಆರೋಪದ ಮೇಲೆ ಸಿನಿಮಾ ತಂಡದ ಮೇಲೆ ಬಿಎಂಟಿಸಿ ದೂರು ದಾಖಲಿಸಿದೆ.
PublicNext
09/01/2025 12:08 pm