ವಿರಾಜಪೇಟೆ : ದೇವಾಲಯದ ಕಾಣಿಕೆ ಹುಂಡಿ ಕಳ್ಳತನ ಮಾಡಲು ಯತ್ನಿಸಿದ ಪ್ರಕರಣ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಶ್ರೀಮುತ್ತಪ್ಪ ಹಾಗೂ ಐಶ್ವರ್ಯ ಗಣಪತಿ ದೇವಸ್ಥಾನದಲ್ಲಿ ನಡೆದಿದೆ.
ನಿನ್ನೆ ಮಧ್ಯರಾತ್ರಿ ಸುಮಾರು 1.45 ಗಂಟೆ ವೇಳೆ ದೇವಾಲಯದ ಆವರಣಕ್ಕೆ ಬಂದ ಚೋರರು ಹುಂಡಿಯನ್ನು ಕದ್ದು ಹೊರಗೆ ಬಂದಿದ್ದಾರೆ. ಈ ಸಂದರ್ಭ ನಾಯಿಗಳು ಬೊಗಳಿದ್ದು, ಅಕ್ಕಪಕ್ಕದ ಮನೆಯವರು ಹೊರ ಬಂದಿದ್ದಾರೆ. ಆತಂಕಗೊAಡ ಕಳ್ಳರು ಕಾಣಿಕೆ ಹುಂಡಿಯನ್ನು ಅಲ್ಲೇ ಬಿಟ್ಟು ಪಕ್ಕದ ಕಾಡಿನೊಳಗೆ ಪರಾರಿಯಾಗಿದ್ದಾರೆ. ಗ್ರಾಮಸ್ಥರು ಸೇರಿ ಹುಡುಕಾಡಿದರೂ ಪರಾರಿಯಾದವರು ಪತ್ತೆಯಾಗಲಿಲ್ಲ.
ದೇವಾಲಯದ ಆಡಳಿತ ಮಂಡಳಿ ನೀಡಿದ ದೂರಿನ ಹಿನ್ನೆಲೆ ಸಿದ್ದಾಪುರ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೋರರ ಪತ್ತೆಗೆ ತನಿಖೆ ಮುಂದುವರೆದಿದೆ. ಮಾಲ್ದಾರೆ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Kshetra Samachara
05/01/2025 09:57 pm