ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಮವಾರಪೇಟೆ : ಹುತಾತ್ಮ ಯೋಧ ದಿವಿನ್ ಮನೆಗೆ ಪೊನ್ನಣ್ಣ ಭೇಟಿ

ಸೋಮವಾರಪೇಟೆ : ಸೇನಾ ವಾಹನ ಅವಘಡಕ್ಕೀಡಾಗಿ ಹುತಾತ್ಮನಾದ ಆಲೂರು ಸಿದ್ದಾಪುರ ಮಾಲಂಬಿ ನಿವಾಸಿ, ಪಳಂಗೋಟು ದಿವಿನ್ ಅವರ ಮನೆಗೆ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಭೇಟಿ ನೀಡಿ, ತಾಯಿ ಜಲಜಾಕ್ಷಿ ಅವರಿಗೆ ಸಾಂತ್ವನ ಹೇಳಿದರು.

ಮಾಲಂಬಿಯಲ್ಲಿ ನಿರ್ಮಿಸಿರುವ ನೂತನ ಮನೆಗೆ ಭೇಟಿ ನೀಡಿದ ಎ.ಎಸ್. ಪೊನ್ನಣ್ಣ ಅವರು ಯೋಧ ದಿವಿನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಮನ ಸಲ್ಲಿಸಿ ದರು. ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ಸಹಾಯ ಒದಗಿಸುವ ಭರವಸೆ ನೀಡಿದ ಶಾಸಕರು, ಘಟನೆ ಸಂಬಂಧ ಸಂತಾಪ ವ್ಯಕ್ತಪಡಿಸಿದರು.

ಹುತಾತ್ಮ ಯೋಧ ದಿವಿನ್ ಅವರ ಪುತ್ಥಳಿಯನ್ನು ಆಲೂರು ಸಿದ್ದಾಪುರ ಅಥವಾ ಕುಶಾಲನಗರದಲ್ಲಿ ಸ್ಥಾಪಿಸಲು ಕ್ರಮ ವಹಿಸುವಂತೆ ಇದೇ ಸಂದರ್ಭ ದಿವಿನ್ ಅವರ ತಾಯಿ ಜಲಜಾಕ್ಷಿ ಶಾಸಕರಿಗೆ ಮನವಿ ಮಾಡಿದರು.

ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸುವುದಾಗಿ ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು.

Edited By : PublicNext Desk
PublicNext

PublicNext

07/01/2025 07:57 pm

Cinque Terre

20.87 K

Cinque Terre

1

ಸಂಬಂಧಿತ ಸುದ್ದಿ