ಮಡಿಕೇರಿ: ತಾನು ಮಾಡುವ ಸೇವೆ ಶಾಶ್ವತವಾಗಿ ಉಳಿಯಬೇಕು, ಬಡ ಕುಟುಂಬಕ್ಕೆ ಆಸರೆಯಾಗಬೇಕು ಎನ್ನುವ ಅಭಿಲಾಷೆೆಯಿಂದ ಅಪರೂಪದ ದಾನಿಯೊಬ್ಬರು ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಸಾಮಾಜಿಕ ಕಳಕಳಿಯೊಂದಿಗೆ ಹುಟ್ಟು ಹಬ್ಬದಂದು ಅದನ್ನು ಹಸ್ತಾಂತರ ಮಾಡಿದ ಅಪರೂಪದ ಕ್ಷಣಕ್ಕೆ ವಿರಾಜಪೇಟೆಯ ತೆರ್ಮೆಕಾಡು ಪೈಸಾರಿ ಸಾಕ್ಷಿಯಾಯಿತು. ಆರ್ಜಿ ಗ್ರಾಮದ ನಿವಾಸಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು, ವಿದ್ಯುತ್ ಗುತ್ತಿಗೆದಾರರು ಮತ್ತು ತಾಲ್ಲೂಕು ಬಿಲ್ಲವ ಸೇವಾ ಸಂಘದ ಅದ್ಯಕ್ಷ ಬಿ.ಎಂ.ಗಣೇಶ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದು ತೆರ್ಮೆಕಾಡು ಪೈಸಾರಿಯ ಶಂಕ್ರು ಹಾಗೂ ವಾಸಂತಿ ಕುಟುಂಬಕ್ಕೆ ತಾವು ನಿರ್ಮಿಸಿಕೊಟ್ಟ ಮನೆಯನ್ನು ಕೀಲಿ ಕೈ ನೀಡುವ ಮೂಲಕ ಹಸ್ತಾಂತರಿಸಿದರು.
ಇದು ಇವರು ಬಡ ಮಂದಿಗೆ ನೀಡುತ್ತಿರುವ ಮೂರನೇ ಮನೆಯಾಗಿದೆ. ಈ ಹಿಂದೆ ಪೆರುಂಬಾಡಿ ಗ್ರಾಮದ ಕಾಳ ಮತ್ತು ಕೆದಮುಳ್ಳೂರು ಗ್ರಾಮ ಪಂಚಾಯ್ತಿಯ ತೆÀರ್ಮೆಮೊಟ್ಟೆ ಗ್ರಾಮದ ನಿವಾಸಿ ಬಿ.ಎಂ.ಕಮಲ ಅವರುಗಳಿಗೆ ಮನೆ ನಿರ್ಮಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಹಸ್ತಾಂತರ ಮಾಡಿದ್ದರು. ಅಲ್ಲದೆ ಒಟ್ಟು 6 ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕೂಡ ಕಲ್ಪಸಿಕೊಟ್ಟಿದ್ದಾರೆ.
Kshetra Samachara
08/01/2025 06:19 pm