ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ : ಕ್ರಾಸ್ ಕಂಟ್ರಿ ಓಟದಲ್ಲಿ ಕೊಡಗಿನ ತೇಜಸ್ವಿ ಸಾಧನೆ

ಮಡಿಕೇರಿ : ಬೆಂಗಳೂರಿನಲ್ಲಿ ನಡೆದ 59ನೇ ವರ್ಷದ ಕರ್ನಾಟಕ ರಾಜ್ಯ ಕ್ರಾಸ್ - ಕಂಟ್ರಿ ಓಟದಲ್ಲಿ ಜಿಲ್ಲೆಯ ತೇಜಸ್ವಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ತೇಜಸ್ವಿ10 ಕಿ.ಮೀ. ದೂರವನ್ನು 38 ನಿಮಿಷದಲ್ಲಿ ಗುರಿ ಮುಟ್ಟಿ ತಾ.12 ರಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆಯುವ ರಾಷ್ಟçಮಟ್ಟದ ಕ್ರಾಸ್ - ಕಂಟ್ರಿ ಓಟಕ್ಕೆ ಆಯ್ಕೆಗೊಂಡಿದ್ದಾರೆ. ತೇಜಸ್ವಿ ಬೆಂಗಳೂರಿನ ಹುಲಿಮಾವು ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕೋರಂಗಾಲದ ಎನ್.ಪಿ. ಲೋಕನಾಥ್ ಹಾಗೂ ಮೀನಾಕುಮಾರಿ ದಂಪತಿಯ ಪುತ್ರಿಯಾಗಿದ್ದಾಳೆ. ತೆಜಸ್ವಿನಿಯ ಈ ಸಾಧನೆ ಮತ್ತಷ್ಟು ಎತ್ತರಕ್ಕೆ ಬೆಳೆಯಲೆಂದು ಕೊಡಗಿನ ಜನತೆ ಹಾರೈಸಿದ್ದಾರೆ.

Edited By : PublicNext Desk
Kshetra Samachara

Kshetra Samachara

07/01/2025 04:59 pm

Cinque Terre

340

Cinque Terre

0

ಸಂಬಂಧಿತ ಸುದ್ದಿ