ನಾಪೋಕ್ಲು: ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕೂರ್ಗ್ ಜಂಇಯ್ಯತುಲ್ ಉಲಮಾ ಇದರ ಗೋಲ್ಡನ್ ಜ್ಯುಬಿಲಿ 50ನೇ ವಾರ್ಷಿಕ ಮಹಾಸಮ್ಮೇಳನ ಪ್ರಚಾರಾರ್ಥ ಕೊಡಗು ಜಿಲ್ಲಾ ಸಂದೇಶ ಯಾತ್ರೆ ಸಫರೇ ಇಫಾದಕ್ಕೆ ಗರಗಂದೂರಿನಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.
ಸುಂಟಿಕೊಪ್ಪ ಸಮೀಪದ ಗರಗಂದೂರು ಕಾಜೂರು ದರ್ಗಾದಲ್ಲಿ ಝಿಯಾರತ್ ನೊಂದಿಗೆ ಯಾತ್ರೆಗೆ ಕೂರ್ಗ್ ಜಂಇಯ್ಯತುಲ್ ಉಲಮಾ ಜಿಲ್ಲಾಧ್ಯಕ್ಷರಾದ ಸಯ್ಯದ್ ಶಿಹಾಬುದ್ದೀನ್ ಅಲ್ ಹೈದರೂಸಿ ಕಿಲ್ಲೂರು ತಂಙಳ್ ಪ್ರಾರ್ಥನೆ ನೆರವೆರಿಸುವ ಮೂಲಕ ಚಾಲನೆ ನೀಡಿದರು.
ಸಂದೇಶ ಯಾತ್ರೆಯೂ ಕೊಡಗಿನಾದ್ಯಂತ ಸಂಚರಿಸಿ ಜನವರಿ 7 ರಂದು ಎಮ್ಮೆಮಾಡಿನಲ್ಲಿ ಸಮಾಪನಗೊಳ್ಳಲಿದೆ.ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಶಿಹಾಬುದ್ದೀನ್ ಐದರೂಸಿ ಕಿಲ್ಲೂರು ತಙ್ಙಳ್,ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್,ಕೋಶಾಧಿಕಾರಿ ಹುಸೈನ್ ಸಖಾಫಿ ಉಸ್ತಾದ್ ಹಾಗೂ ಮುಶಾವರ ಸದಸ್ಯರು ಜಿಲ್ಲೆಯ ಸಾಂಘಿಕ ನಾಯಕರ ನೇತೃತ್ವದಲ್ಲಿ ಕೊಡಗು ಜಿಲ್ಲೆಯಾದ್ಯಂತ ಸಂದೇಶ ಯಾತ್ರೆ ತೆರಳಲಿದೆ. ಹನೀಫ್ ಸಖಾಫಿ ಕೊಂಡಂಗೇರಿ, ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ ಗುಂಡಿಗೆರೆ,ವಖ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ ಸಂದೇಶ ಭಾಷಣ ಮಾಡಿ ಸಮ್ಮೇಳನ ಯಶಸ್ಸಿಗೆ ಕರೆ ನೀಡಿದರು.
Kshetra Samachara
07/01/2025 03:03 pm