ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸೀಜ್ ಆಗಿದ್ದ ಆಟೋ ಹಿಂದಿರುಗಿಸಲು ಲಂಚ ಸ್ವೀಕರಿಸುತ್ತಿದ್ದ ASI ಲೋಕಾಯುಕ್ತ ಬಲೆಗೆ

ಬೆಂಗಳೂರು : ಕಾನೂನು ಬಾಹಿರವಾಗಿ ವಶಕ್ಕೆ ಪಡೆಯಲಾಗಿದ್ದ ಆಟೋ ಹಿಂತಿರುಗಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಂಜಯನಗರ ಪೊಲೀಸ್ ಠಾಣೆಯ ಎಎಸ್‌ಐ ವಿಜಯ್ ಕುಮಾರ್ ಹಾಗೂ ಲಂಚದ ಹಣ ಸ್ವೀಕರಿಸುತ್ತಿದ್ದ ಸೈಯ್ಯದ್ ರಿಜ್ವಾನ್ ಎಂಬಾತನನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿಯ ನಿವಾಸಿಯಾಗಿರುವ ಮೊಹಮ್ಮದ್ ಸುಜತ್ ಎಂಬುವವರಿಂದ ಜಪ್ತಿ ಮಾಡಿದ್ದ ಆಟೋ ಬಿಡುಗಡೆಗಾಗಿ ಎಎಸ್ಐ ವಿಜಯ್ ಕುಮಾರ್ 50 ಸಾವಿರ ರೂ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು.

ಈ ಕುರಿತು ಮೊಹಮ್ಮದ್‌ ಸುಜತ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರನ್ವಯ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು, ಶನಿವಾರ ಎಎಸ್ಐ ವಿಜಯ್ ಕುಮಾರ್ ಹಾಗೂ ಅವರ ಪರವಾಗಿ 40 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದ ಸೈಯ್ಯದ್ ರಿಜ್ವಾನ್‌ನನ್ನ ಬಂಧಿಸಿದ್ದಾರೆ.

ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

Edited By : Ashok M
PublicNext

PublicNext

05/01/2025 12:14 pm

Cinque Terre

31.96 K

Cinque Terre

0

ಸಂಬಂಧಿತ ಸುದ್ದಿ