ಬೆಂಗಳೂರಿನಲ್ಲಿ ಚೈನಾ ವೈರಸ್ ಕಾಣಿಸಿಕೊಂಡಿದೆ, ಕರ್ನಾಟಕಕ್ಕೆ HMPV ವೈರಸ್ ಬಂದಿದೆ ಎಂಬ ಮಾಹಿತಿ ಬಂದಿದೆ ಆದ್ರಲ್ಲೂ ಇಬ್ಬರು ಮಕ್ಕಳಲ್ಲಿ ವೈರಸ್ ಕಾಣಿಸಿಕೊಂಡಿದೆ ಹೀಗಾಗಿ ಮುಂಜಾಗ್ರತಾ ಕ್ರಮಕ್ಕೆ ಅರೋಗ್ಯ ಇಲಾಖೆಗೆ ದಿನೇಶ್ ಗುಂಡೂರಾವ್ ಅವರಿಗೆ ಸೂಚನೆ ಕೊಟ್ಟಿದ್ದೆನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಸಭೆ ಮಾಡ್ತಿದ್ದಾರೆ, ಇದು ಅಪಾಯಕಾರಿ ವೈರಸ್ ಅಲ್ಲಾ ಆದ್ರು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ, ಆರೋಗ್ಯ ಇಲಾಖೆಯವರು ಏನೇನು ಕ್ರಮ ಕೈಗೊಳ್ಳಬೇಕು ಅಂತ ಸಭೆ ಮಾಡಿ ತೀರ್ಮಾನ ಮಾಡ್ತಾರೆ.
ವಿದೇಶದಿಂದ ಬರುವವರಿಗೆ ಸ್ಕ್ರೀನಿಂಗ್ ಮಾಡುವ ವಿಚಾರದ ಬಗ್ಗೆ ಆರೋಗ್ಯ ಇಲಾಖೆಯವರು ಏನು ಕ್ರಮ ತೆಗೆದುಕೊಳ್ಳಬೇಕೊ ಅದನ್ನ ತೆಗೆದುಕೊಳ್ಳೊಕೆ ಹೇಳಿದ್ದೇನೆ, ಸರ್ಕಾರ ಏನೇನು ಕ್ರಮ ಬೇಕೊ ಅದನ್ನ ತೆಗೆದುಕೊಳ್ತಿದೆ. ಈಗ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಇಬ್ಬರು ಸಭೆ ಮಾಡ್ತಿದ್ದಾರೆ ಆಗತ್ಯಬಿದ್ದರೆ ನಾನು ಸಭೆ ಮಾಡ್ತಿನಿ ಎಂದು ತಿಳಿಸಿದರು.
PublicNext
06/01/2025 03:02 pm