ದೊಡ್ಡಬಳ್ಳಾಪುರ : ಘಾಟಿ ಜಾತ್ರೆಯಲ್ಲಿ ಜನದಟ್ಟನೆಯ ಅವಕಾಶವನ್ನ ಬಳಿಸಿಕೊಂಡ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ರಶ್‌ನಲ್ಲಿ ಬಸ್ ಹತ್ತುವಾಗ ಮಹಿಳೆಯ ಮಾಂಗಲ್ಯ ಸರವನ್ನ ಎಗರಿಸಿದ್ದಾರೆ.
ನಿನ್ನೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸ ಅದ್ಧೂರಿಯಾಗಿ ನೆರವೇರಿತು, ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಅಕ್ಕಯ್ಯಮ್ಮ ಎಂಬಾತ ಮಹಿಳೆ ಜಾತ್ರೆ ನಂತರ ವಾಪಸ್ ಊರಿಗೆ ತೆರಳಲು ರಶ್‌ನಲ್ಲಿ ಬಸ್ ಹತ್ತುವ ವೇಳೆ ಆಕೆಯ ಮಾಂಗಲ್ಯ ಸರವನ್ನ ಕಳ್ಳರು ಎಗರಿಸಿದ್ದಾರೆ.
ಸುಮಾರು 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನ ಎಗರಿಸಿ ಖದೀಮರು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
PublicNext
06/01/2025 07:33 pm